ಕಾಸರಗೋಡು: ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರಬುನಾದಿ ಹಾಕಿಕೊಟ್ಟಿರುವ ಮಾಧ್ಯಮ ರಂಗವನ್ನು ಶಿಥಿಲಗೊಳ್ಳದಂತೆ ನೋಡಿಕೊಳ್ಳು ಹೊನೆಗಾರಿಕೆ ಪತ್ರಕರ್ತರಿಗಿದೆ. ಜನತೆಗೆ ಸತ್ಯ ತಿಳಿಸಿಕೊಡುವ ಜವಾಬ್ದಾರಿ ಪತ್ರಕರ್ತರದ್ದಾಗಿದೆ. ಬೃಹತ್ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂದು ಮಾಧ್ಯಮ ಲೋಕ ಆತಂಕದ ಸ್ಥಿತಿ ಎದುರಿಸುತ್ತಿದ್ದು, ಮಾಧ್ಯಮ ಸ್ವಾತಂತ್ರ್ಯ ಹನನಗೊಳ್ಳುತ್ತಿರುವ ಬಗ್ಗೆ ಆತಂಕ ಎದುರಾಗಿದೆ ಎಂದು ಮಾಜಿ ಸಂಸದ ಡಾ. ಸೆಬಾಸ್ಟಿಯನ್ ಪೋಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲೆಯ ಪ್ರತಿಷ್ಠಿತ ಶೈಕ್ಷಣಿಕ ಧಾರ್ಮಿಕ ಸಂಸ್ಥೆ ದೇಳಿಯ ಜಾಮಿಯಾ-ಸಅದಿಯ-ಅರೇಬಿಯಾದ ಸುವರ್ಣ ಮಹೋತ್ಸವ ಸಮಾರಂಭದ ಪೂರ್ವಭಾವಿಯಾಗಿ ಬುಧವಾರ ದೇಳಿಯ ಜಾಮಿಯಾ-ಸಅದಿಯ-ಅರೇಬಿಯಾದಲ್ಲಿ ಆಯೋಜಿಸಲಾಗಿದ್ದ ಮಾಧ್ಯಮ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಜಾಮಿಯಾ-ಸಅದಿಯ-ಅರೇಬಿಯಾ ಸಂಸ್ಥೆ ಅಧ್ಯಕ್ಷ ಸಯ್ಯದ್ ಕೆ.ಎಸ್. ಆಟ್ಟಕೋಯ ತಙಳ್ ಕುಂಬೋಳ್ ಅಧ್ಯಕ್ಷತೆ ವಹಿಸಿದ್ದರು. ಅಕಾಡಮಿಕ್ ಕೌನ್ಸಿಲರ್ ಮಹಮ್ಮದ್ ಸಖಾಫಿ ತೃಕ್ಕರಿಪುರ ಮುಖ್ಯ ಮಾಡಿದರು. ಪತ್ರಕರ್ತ ಮುಸ್ತಫಾ ಪಿ.ಅರೈಕಲ್, ಕಾಸರಗೋಡು ಪ್ರೆಸ್‍ಕ್ಲಬ್ ಅಧ್ಯಕ್ಷ ಮಹಮ್ಮದ್ ಹಾಶಿಂ, ಕಾರ್ಯದರ್ಶಿ ಪದ್ಮೇಶ್ ಕೆ.ವಿ, ಅಬ್ದುಲ್ ರಶೀದ್ ಕೆ. ಮಾಣಿಯೂರ್, ಅಶ್ರಫ್ ಆಲಿ ಚೇರಂಗೈ, ವಿ.ವಿ ಪ್ರಭಾಕರನ್ ಉಪಸ್ಥಿತರಿದ್ದರು. ಸಿ.ಎಲ್ ಹಮೀದ್ ಸ್ವಾಗತಿಸಿದರು. ಮುಜೀಬ್ ಕಳನಾಡ್ ವಂದಿಸಿದರು.
ಜಾಮಿಯಾ-ಸಅದಿಯ-ಅರೇಬಿಯಾದ ಸುವರ್ಣ ಮಹೋತ್ಸವ ಸಮಾರಂಭ ಡಿಸೆಂಬರ್ 27ರಿಂದ 29ರ ವರೆಗೆ ದೇಳಿಯಲ್ಲಿ ಜರುಗಲಿದೆ. 27ರಂದು ಸಾಯಂಕಾಲ 5ಕ್ಕೆ ಕೇರಳ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ಸಮಾರಂಭ ಉದ್ಘಾಟಿಸುವರು. ಜಾಮಿಯಾ-ಸಅದಿಯ-ಅರೇಬಿಯಾ ಸಂಸ್ಥೆ ಅಧ್ಯಕ್ಷ ಸಯ್ಯದ್ ಕೆ.ಎಸ್. ಆಟ್ಟಕೋಯ ತಙಳ್ ಕುಂಬೋಳ್ ಅಧ್ಯಕ್ಷತೆ ವಹಿಸುವರು.


