ಕುಂಬಳೆ: ರಾಷ್ಟ್ರೀಯ ಕನ್ನಡ ಪರಿಷತ್ತು ಕಾಸರಗೋಡು ಇದರ ಆಶ್ರಯದಲ್ಲಿ `ರಾಷ್ಟ್ರೀಯ ಕನ್ನಡ ಸಿರಿ ಸಮ್ಮೇಳನ' ಎಂಬ ಐತಿಹಾಸಿಕ ಕಾರ್ಯಕ್ರಮವನ್ನು ಎಪ್ರಿಲ್ 10, 11 ಮತ್ತು 12 ರಂದು ಸರೋವರ ದೇವಸ್ಥಾನ ಅನಂತಪುರ ದೇವಸ್ಥಾನ ಪರಿಸರದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಕರ್ನಾಟಕ ಸರ್ಕಾರ ಹಾಗು ವಿವಿಧ ಕನ್ನಡ ಪರ ಸಂಘಟನೆಗಳ ಸಹಯೋಗದಿಂದ ವಿಜೃಂಭಣೆಯಿಂದ ಜರಗಲಿದೆ. ದೇಶ ವಿದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಕನ್ನಡಿಗರು ಹಾಗು ನೂರಾರು ಸಂಖ್ಯೆಯಲ್ಲಿ ಕಲಾವಿದರು, ವಿದ್ವಾಂಸರು, ಸಚಿವರು, ಧಾರ್ಮಿಕ ಮುಂದಾಳುಗಳು ಭಾಗವಹಿಸಲಿದ್ದಾರೆ. ಆದುದರಿಂದ ದೇವಸ್ಥಾನದ ಕಲ್ಯಾಣ ಮಂಟಪ, ಊಟದ ಹಾಲ್, ಅಡುಗೆ ಪಾತ್ರೆ, ಪರಿಸರ ಇತ್ಯಾದಿಗಳನ್ನು ಒದಗಿಸಿ ಕಾರ್ಯಕ್ರಮದ ಯಶಸ್ಸಿಗೆ ಸಂಪೂರ್ಣ ಅನುಮತಿ ನೀಡಿ ಯಶಸ್ವಿಗೊಳಿಸಬೇಕೆಂದು ವಿನಂತಿಸಿದೆ.
ಈ ಬಗ್ಗೆ ಚರ್ಚಿಸಲು ಡಿ.29 ರಂದು ಬೆಳಗ್ಗೆ 10 ಗಂಟೆಗೆ ದೇವಸ್ಥಾನ ಪರಿಸರದಲ್ಲಿ ಸಮಾಲೋಚನಾ ಸಭೆ ನಡೆಯಲಿದೆ.

