ಮುಳ್ಳೇರಿಯ: ಆರ್ಯ ಮರಾಠ ಸಮಾಜದ ಲಾಡ್ ಮನೆತನದ ಕುಂಡಂಗುಳಿ ಚೊಟ್ಟೆ ಶ್ರೀ ದುರ್ಗಾದೇವಿ ದೇವರ ಮನೆಯಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಕಾರ್ಯಕ್ರಮಗಳು ಡಿ.29 ಮತ್ತು 30ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಡಿ.29ರಂದು ಬೆಳಿಗ್ಗೆ 9ಕ್ಕೆ ಗಣಪತಿ ಹೋಮ, ಮಧ್ಯಾಹ್ನ 12.30ಕ್ಕೆ ಕುಲದೇವರಿಗೆ ಪೂಜೆ, 2.30ಕ್ಕೆ ವಾರ್ಷಿಕ ಮಹಾಸಭೆ ನಡೆಯಲಿದ್ದು ನೂತನ ಆಡಳಿತ ಸಮಿತಿಯ ಆಯ್ಕೆ ನಡೆಯಲಿದೆ. ಸಂಜೆ 4ಕ್ಕೆ ಕುಂಟಾರು ವಲಯದ ಮಕ್ಕಳಿಂದ ಕುಣಿತ ಭಜನೆ, 6ಕ್ಕೆ ದೀಪಾರಾಧನೆ, 6.30ಕ್ಕೆ ಶ್ರೀ ಸತ್ಯನಾರಾಯಣ ಪೂಜೆ ಆರಂಭ, ರಾತ್ರಿ 8.30ಕ್ಕೆ ಕುಲದೇವರಿಗೆ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಡಿ.30ರಂದು ಬೆಳಿಗ್ಗೆ 7.30ಕ್ಕೆ ಗಣಪತಿ ಪ್ರಾರ್ಥನೆ, 8ಕ್ಕೆ ಶ್ರೀ ನಾಗರಕ್ತೇಶ್ವರಿ ಕಟ್ಟೆಗಳಲ್ಲಿ ಅಭಿಷೇಕ, ತಂಬಿಲ ಪ್ರಾರಂಭ, 9.30ಕ್ಕೆ ಶ್ರೀ ನಾಗರಕ್ತೇಶ್ವರೀ ಕಟ್ಟೆಗಳಲ್ಲಿ ಮಹಾಪೂಜೆ, 11ಕ್ಕೆ ಶ್ರೀ ವೆಂಕಟ್ರಮಣ ದೇವರ ಪಾನಕಪೂಜೆ ಮತ್ತು ಮುಡಿಪು ಕಾಣಿಕೆ, ಮಧ್ಯಾಹ್ನ 12.30ಕ್ಕೆ ಶ್ರೀ ಕುಲದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, 2.30ಕ್ಕೆ ಶ್ರೀ ಗುಳಿಗನಿಗೆ ಕಲಯ ನಡೆಯಲಿದೆ.

