ಮಂಜೇಶ್ವರ: ಕೋಳ್ಯೂರು ಶ್ರೀ ಶಂಕರನಾರಾಯಣ ದೇವಾಲಯದಲ್ಲಿ ಮಂಡಲಪೂಜೆಯ ಪ್ರಯುಕ್ತ ಸ್ಥಳೀಯ ಹವ್ಯಾಸಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ ಜ.4 ರಂದು ಅಪರಾಹ್ನ 3 ರಿಂದ ಶ್ರೀಕ್ಷೇತ್ರ ಸಭಾಂಗಣದಲ್ಲಿ ನಡೆಯಲಿದೆ.
ಪಂಚವಟಿ- ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರಸಂಗಗಳ ಪ್ರದರ್ಶನ ನಡೆಯಲಿದೆ. ಪಂಚವಟಿ ಪ್ರಸಂಗದಲ್ಲಿ ಹಿಮ್ಮೇಳದಲ್ಲಿ ಭಾಗವತರಾಗಿ ರಾಜ ಭಟ್ ಬರೆಮನೆ, ಡಾ. ಶ್ರೀಕೃಷ್ಣ ಭಟ್ ಸುಣ್ಣಂಗುಳಿ, ಚೆಂಡೆ-ಮದ್ದಳೆಯಲ್ಲಿ ರಾಮಮೂರ್ತಿ ಕುದ್ರೆಕೋಡ್ಳು, ರಾಮದಾಸ ಕುಡ್ಪಲ್ತಡ್ಕ ಪ್ರಸಂಗ ಮುನ್ನಡೆಸುವರು. ಪಾತ್ರವರ್ಗದಲ್ಲಿ ರಾಮ ಗುರುರಾಜ ಹೊಳ್ಳ ಬಾಯಾರು, ಲಕ್ಷ್ಮಣ ಗುರುಪ್ರಸಾದ್ ಹೊಳ್ಳ ತಿಂಬರ, ಸೀತೆ ಜಯಪ್ರಸಾದ್ ಸಾಲ್ಯಾನ್,ಋಷಿಗಳು ಮಹಾಬಲೇಶ್ವರ ಭಟ್ ಕೊಮ್ಮೆ, ಅಕ್ಷಯ ಗಣೇಶ, ಆದರ್ಶ ಕೃಷ್ಣ, ಘೋರ ಶೂರ್ಪಣಖಿ ಡಾ. ಬಾಲಸುಬ್ರಹ್ಮಣ್ಯ ಭಟ್ ಬರೆಮನೆ, ಮಾಯಾ ಶೂರ್ಪಣಖಿ ಸಂದೀಪ್ ಕೋಳ್ಯೂರು, ಖರ ದೂಷಣ ತ್ರಿಶಿರಾದಿಗಳು ವಿಶ್ವೇಶರ ಭಟ್ (ರಾಜ) ಮುಂಡ್ರಕಜೆ, ಉದಯ ಭಟ್ ಕೊರತ್ತಿಗುಂಡಿ, ಗಣರಾಜ್ ಭಟ್ , ಕೃಷ್ಣ ಹೊಳ್ಳ ವರ್ಕಾಡಿ , ಗೋವಿಂದ ಕೃಷ್ಣ ಅಬ್ಬೆಮನೆ ಭಾಗವಹಿಸುವರು. ಜಾಂಬವತಿ ಕಲ್ಯಾಣ ಪ್ರಸಂಗದಲ್ಲಿ ಭಾಗವತರು ಬಲಿಪ ಪ್ರಸಾದ್ ಭಟ್,
ಚೆಂಡೆ-ಮದ್ದಳೆಯಲ್ಲಿ ಸುಬ್ರಹ್ಮಣ್ಯ ಶಾಸ್ತ್ರಿ ಮಣಿಮುಂಡ, ಗಣೇಶ್ ಭಟ್ ಬೆಳಾಲು, ಚಕ್ರತಾಳದಲ್ಲಿ ಮುರಾರಿ ಪಂಜಿಗದ್ದೆ ಭಾಗವಹಿಸುವರು. ಪಾತ್ರವರ್ಗದಲ್ಲಿ ಸತ್ರಾಜಿತ ವಿಠಲ ಭಟ್ ಮೊಗಸಾಲೆ, ವನಪಾಲಕರು ಮಹಾಬಲೇಶ್ವರ ಭಟ್ ಕೊಮ್ಮೆ, ಅಕ್ಷಯ ಗಣೇಶ, ಆದರ್ಶ ಕೃಷ್ಣ, ಪ್ರಸೇನ ಅಭಿಷೇಕ್ ಕೊಮ್ಮೆ, ಗೆಳೆಯರು ಅದ್ವೈತ ಭಾರಧ್ವಾಜ, ಅಭಿನವ್ ಸುವರ್ಣ, ಸೂಕರ ಚಂದ್ರಶೇಖರ ಆಚಾರ್ ಬೇಕರಿ, ಕೇಸರಿ ಸತೀಶ್ ಸುವರ್ಣ ಕೊಡ್ಲಮೊಗರು, ಜಾಂಬವಂತ ಕಿಶೋರ್ ಭಟ್ ಕೊಮ್ಮೆ, ಜಾಂಬವತಿ ಜಯಪ್ರಸಾದ್ ಸಾಲ್ಯಾನ್, ಬಲರಾಮ ಶಶಿಕಿರಣ ಸುಣ್ಣಂಗುಳಿ, ನಾರದ ವಿಠಲ ಭಟ್ ಮೊಗಸಾಲೆ, ಕೃಷ್ಣ ಅವಿನಾಶ್ ಹೊಳ್ಳ ವರ್ಕಾಡಿ ಭಾಗವಹಿಸುವರು.

