ಬದಿಯಡ್ಕ: ಅಗಲ್ಪಾಡಿ ಜಯನಗರ ಶ್ರೀ ಗೋಪಾಲಕೃಷ್ಣ ಭಜನ ಮಂದಿರದ ನೂತನ ಭೋಜನೆ ಶಾಲೆ ಮತ್ತು ಸಭಾ ಭವನದ ಕಾಮಗಾರಿ ಪ್ರಗತಿಯಲ್ಲಿದ್ದು, ಕರ್ನಾಟಕ ವಿಧಾನಸಭೆಯ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಯಾದವ್ ಹಾಗೂ ಕರ್ನಾಟಕ ರಾಜ್ಯ ಯಾದವ ಮಹಾಸಭಾದ ರಾಜ್ಯ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್ ಬುಧವಾರ ಶ್ರೀ ಮಂದಿರಕ್ಕೆ ಭೇಟಿ ನೀಡಿದರು. ಸಾಂಪ್ರದಾಯಿಕ ಶೈಲಿಯಲ್ಲಿ ಅವರನ್ನು ಬರಮಾಡಿಕೊಳ್ಳಲಾಯಿತು. ಕಾಮಗಾರಿಯ ಹಂತಗಳನ್ನು ವೀಕ್ಷಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಮುಂದಿನ ಕೆಲಸ ಕಾರ್ಯಗಳಿಗೆ ವಿನಿಯೋಗಿಸಲು ಆರ್ಥಿಕ ಸಹಾಯವಾಗಿ 50 ಸಾವಿರ ರೂಪಾಯಿಯನ್ನು ವೈಯಕ್ತಿಕವಾಗಿ ಶ್ರೀಮಂದಿರದ ಪದಾಧಿಕಾರಿಗಳಿಗೆ ಈ ಸಂದರ್ಭದಲ್ಲಿ ಹಸ್ತಾಂತರಿಸಿದರು. ಮುಂದಿನ ಕಾಮಗಾರಿಗಳಿಗಾಗಿ ಕರ್ನಾಟಕ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಒದಗಿಸಿಕೊಡುವುದಾಗಿ ಭರವಸೆಯನ್ನೂ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಮಂದಿರದ ಗೌರವ ಸಲಹೆಗಾರ ಸುಬ್ರಹ್ಮಣ್ಯ ಭಟ್ ತಲೇಕ, ರಕ್ಷಾಧಿಕಾರಿ ಜನಾರ್ದನ ಮಣಿಯಾಣಿ ಬೆದ್ರುಕೂಡ್ಲು, ಅಧ್ಯಕ್ಷ ಬಾಬು ಮಾಸ್ತರ್ ಅಗಲ್ಪಾಡಿ, ಯುವ ವಿಭಾಗದ ಗೌರವಾಧ್ಯಕ್ಷ ಸುಧಾಮ ಮಣಿಯಾಣಿ, ಪ್ರಧಾನ ಕಾರ್ಯದರ್ಶಿ ರಮೇಶ್ ಕೃಷ್ಣ ಪದ್ಮಾರು, ಕೋಶಾಧಿಕಾರಿ ಅಚ್ಚುತ ಪದ್ಮಾರು, ಕಾರ್ಯದರ್ಶಿ ರಾಜೇಶ್ ಮಾಸ್ತರ್ ಅಗಲ್ಪಾಡಿ, ಅಚ್ಚುತ ಮಾಸ್ತರ್ ಅಗಲ್ಪಾಡಿ, ಯಾದವ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ನಾರಾಯಣ ಪದ್ಮಾರು, ಭಜನ ಸಮಿತಿಯ ಕಾರ್ಯದರ್ಶಿ ಸತ್ಯನಾರಾಯಣ ಅಗಲ್ಪಾಡಿ, ಸದಸ್ಯರುಗಳಾದ ಶ್ರೀಧರ ಪದ್ಮಾರು, ಸುಶೀಲ ಪದ್ಮಾರು, ಶಶಿಕಲಾ ಪದ್ಮಾರು, ಗುರುಪ್ರಸಾದ್, ಗೋಕುಲ್, ಬಾಬು ಮಣಿಯಾಣಿ ಬೆದ್ರುಕೂಡ್ಲು, ಕೃಷ್ಣಪ್ರಸಾದ್ ಬೆದ್ರುಕೂಡ್ಲು, ಶಿವರಾಮ ಪದ್ಮಾರು, ಸದಾಶಿವ ರೈ ಗೋಸಾಡ, ನಾರಾಯಣ ಮಣಿಯಾಣಿ ಉಪ್ಪಂಗಳ, ಬಾಲಕೃಷ್ಣ ಚೆಟ್ಟಿಯಾರ್ ಮಾರ್ಪನಡ್ಕ ಉಪಸ್ಥಿತರಿದ್ದರು.


