ಬದಿಯಡ್ಕ: ಅಂಬೇಡ್ಕರ್ ವಿಚಾರವೇದಿಕೆಯ 2019-20ರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಬಾರಡ್ಕದಲ್ಲಿ ನಡೆಯಿತು. ಅಧ್ಯಕ್ಷ ರಾಮ ಪಟ್ಟಾಜೆ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರ.ಕಾರ್ಯದರ್ಶಿ ಸುಂದರ ಬಾರಡ್ಕ ವರದಿ, ಲೆಕ್ಕಪತ್ರವನ್ನು ಮಂಡಿಸಿದರು. ನಾರಾಯಣ ಬಾರಡ್ಕ, ಶಾಂತ ಬಾರಡ್ಕ, ಸುಮಿತ್ರ ಎರ್ಪಕಟ್ಟೆ, ವಸಂತ ಬಾರಡ್ಕ, ವಿಶ್ವನಾಥ ಬಿ.ಕೆ., ಸತ್ಯರಾಜ್ ಮಾತನಾಡಿದರು. ವಿಶ್ವನಾಥ ಕೆ.ಬಿ., ಬಾಬು ಬಾರಡ್ಕ, ಜಯರಾಜ, ರಾಜಶೇಖರ ಉಪಸ್ಥಿತರಿದ್ದರು. 2020ನೇ ಸಾಲಿಗೆ ಗೌರವಾಧ್ಯಕ್ಷರಾಗಿ ಚಂದ್ರಶೇಖರ ಬಿ., ಅಧ್ಯಕ್ಷರಾಗಿ ರಾಮಪಟ್ಟಾಜೆ, ಉಪಾಧ್ಯಕ್ಷರುಗಳಾಗಿ ಶಾಂತ ಬಾರಡ್ಕ, ರಾಜಶೇಖರ ಮವ್ವಾರು, ಪ್ರ.ಕಾರ್ಯದರ್ಶಿಯಾಗಿ ಸುಂದರ ಬಾರಡ್ಕ, ಜೊತೆಕಾರ್ಯದರ್ಶಿಗಳಾಗಿ ವಿಜಯ ಕುಮಾರ್ ಬಾರಡ್ಕ, ಸುಮಿತ್ರಾ ಎರ್ಪಕಟ್ಟೆ, ಕೋಶಾಧಿಕಾರಿಯಾಗಿ ವಸಂತ ಬಾರಡ್ಕ ಹಾಗೂ 8 ಮಂದಿ ಸದಸ್ಯರನ್ನು ಆರಿಸಲಾಯಿತು.
ಡಿ.28ರಂದು ಜನಾರ್ದನ ಎರ್ಪಕಟ್ಟೆ ನೆನಪು :
ಕಥೆಗಾರ, ಲೇಖಕ ದಿ. ಜನಾರ್ದನ ಎರ್ಪಕಟ್ಟೆಯವರ ನೆನಪು ಕಾರ್ಯಕ್ರಮವು ಡಿ.28ರಂದು ಶನಿವಾರ ಬದಿಯಡ್ಕ ಸಂಸ್ಕøತಿ ಭವನದಲ್ಲಿ ಅಪರಾಹ್ನ 2.30ರಿಂದ ನಡೆಯಲಿರುವುದು ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.

