ಮಂಜೇಶ್ವರ: ಕಡಂಬಾರ್ ಅರಿಬೈಲಿನ ಶ್ರೀನಾಗಬ್ರಹ್ಮ ಯುವಕ ಮಂಡಲ ಹಾಗೂ ಭಜನ ಮಂದಿರದ ನೂತನ ಕಟ್ಟಡದ ಶಿಲಾನ್ಯಾಸ ಶುಕ್ರವಾರ ಅರಿಬೈಲಿನಲ್ಲಿ ತಂತ್ರಿವರ್ಯ ರಾಧಾಕೃಷ್ಣ ಅರಿನಾಯರ ನೇತೃತ್ವದಲ್ಲಿ ನಡೆಯಿತು.
ಸಮಾರಂಭದಲ್ಲಿ ವೈಧಿಕ ವಿಧಿವಿಧಾನಗಳಿಗೆ ರಾಮದಾಸ ಆಚಾರ್ಯ ಕಡಂಬಾರ್ ಪೌರೋಹಿತ್ಯ ವಹಿಸಿದ್ದರು. ನಾಗಬ್ರಹ್ಮ ಯುವಕ ಮಂಡಲದ ಪದಾಧಿಕಾರಿಗಳು, ಸದಸ್ಯರು, ಕಟ್ಟಡಚ ಪುನರ್ ನಿರ್ಮಾಣ ಸಮಿತಿ ಹಾಗೂ ಧಾರ್ಮಿಕ, ಸಾಮಾಜಿಕ ಮುಖಂಡರು ಉಪಸ್ಥಿತರಿದ್ದರು.


