ಕುಂಬಳೆ: ಕೇರಳ ರಾಜ್ಯ ಲೈಬ್ರರಿ ಕೌನ್ಸಿಲ್ ವಜ್ರ ಮಹೋತ್ಸವ ಅಂಗವಾಗಿ ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಮಟ್ಟದ ಸಮಾರಂಭವನ್ನು ಜನವರಿ 5 ರಂದು ಕುಂಬಳೆಯಲ್ಲಿ ಸಂಘಟಿಸಲು ಸ್ವಾಗತ ಸಮಿತಿಯನ್ನು ಕುಂಬಳೆಯಲ್ಲಿ ಇತ್ತೀಚೆಗೆ ರೂಪೀಕರಿಸಲಾಯಿತು.
ವಿಜಯನ್ ಕೆ.ಟಿ ಅಧ್ಯಕ್ಷತೆ ವಹಿಸಿದ್ದರು. ಸ್ವಾಗತ ಸಮಿತಿ ಪದಾಧಿಕಾರಿಗಳಾಗಿ ಗೌರವ ಅಧ್ಯಕ್ಷರು ರಘುದೇವನ್ ಮಾಸ್ತರ್, ಅಧ್ಯಕ್ಷರು ಮೊಹಮ್ಮದ್ ಇಕ್ಬಾಲ್, ಉಪಾಧ್ಯಕ್ಷರು ಅಶ್ರಫ್ ಕೊಡ್ಯಮೆ ಮತ್ತು ಪ್ರಸಾದ್, ಪ್ರಧಾನ ಕಾರ್ಯದರ್ಶಿಯಾಗಿ ಅಹಮ್ಮದ್ ಹುಸೈನ್ ಪಿ.ಕೆ, ಕಾರ್ಯದರ್ಶಿ ನ್ಯಾಯವಾದಿ ಉದಯಕುಮಾರ್, ಜೊತೆಕಾರ್ಯದರ್ಶಿಯಾಗಿ ಕೆ.ಟಿ ವಿಜಯನ್, ರತ್ನಾಕರ ಮತ್ತು ಅನಿಲ್ ಅವರನ್ನು ಆರಿಸಲಾಯಿತು. ಪ್ರಸಾದ್ ಸ್ವಾಗತಿಸಿ, ರತ್ನಾಕರ ವಂದಿಸಿದರು.

