ಮಂಜೇಶ್ವರ : ಪೆÇಸೋಟ್ ಮಹಲ್ಲ್ ಯೂತ್ ವಿಂಗ್ ವತಿಯಿಂದ ಸಾಮೂಹಿಕ ವಿವಾಹ ಸಮಾರಂಭ ಬುಧವಾರ ನಡೆಯಿತು. ಪೆÇಸೋಟ್ ನಲ್ಲಿ ನಡೆದ ಸಮಾರಂಭವನ್ನು ಕೇರಳ ಸರ್ಕಾರದ ಕಂದಾಯ ಸಚಿವ ಇ. ಚಂದ್ರಶೇಖರನ್ ಉದ್ಘಾಟಿಸಿದರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ. ಎಂ. ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಶಾಸಕ ಎಂ. ಸಿ ಕಮರುದ್ದೀನ್, ಕಾಸರಗೋಡು ಜಿಲ್ಲಾ ಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷ ಅಬ್ದುಲ್ ಅಝೀಜ್ ಹಾಜಿ, ಮುಖಂಡರುಗಳಾದ ಬಿ. ವಿ ರಾಜನ್, ಬಶೀರ್ ಕನಿಲ, ಜಯರಾಮ ಬಲ್ಲಂಗುಡೇಲು, ವ್ಯಾಪಾರಿ ಸಮಿತಿ ಅಧ್ಯಕ್ಷ ಬಶೀರ್ ಜಂಕ್ಷನ್, ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತಿ ಅಧ್ಯಕ್ಷ ಜಲೀಲ್, ಅಬ್ದುಲ್ಲ ಗುಡ್ಡಕೇರಿ, ಮಹಲ್ಲ್ ಯೂತ್ ವಿಂಗ್ ಅಧ್ಯಕ್ಷ ಸಿದ್ದೀಕ್. ಎಂ.ಕೆ. ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.
ಸಯ್ಯಿದ್ ಜಲಾಲುದ್ದೀನ್ ತಂಙಳ್,ಯು.ಎಂ. ಅಬ್ದುಲ್ ರಹಿಮಾನ್ ಮುಸ್ಲಿಯಾರ್ ನಿಖಾಹ್ ಗೆ ನೇತೃತ್ವ ನೀಡಿದರು. ನ್ಯಾಯವಾದಿ ಕರೀಂ ಪುಣೆ ಸ್ವಾಗತಿಸಿ, ಮನ್ಸೂರ್.ಬಿ.ಎಂ. ವಂದಿಸಿದರು.


