HEALTH TIPS

ತೈಕಡಪ್ಪುರಂನಲ್ಲಿ ಉತ್ಸವವಾದ ಸೂರ್ಯಗ್ರಹ ವೀಕ್ಷಣೆ


      ಕಾಸರಗೋಡು:  ಜಿಲ್ಲೆಯ ನೀಲೇಶ್ವರದ ತೈಕಪ್ಪುರಂ ಕಡಲತೀರ ಗುರುವಾರ ಕಂಕಣ ಸೂರ್ಯಗ್ರಹಣ ವೀಕ್ಷಣೆಯನ್ನು ಉತ್ಸವವಾಗಿಸಿದೆ. ಸ್ಥಳೀಯರು, ಮಹಿಳೆಯರು, ಮಕ್ಕಳು, ದೇಶ-ವಿದೇಶಗಳ ಮಂದಿ ಸಹಿತ ಸಾವಿರಾರು ಮಂದಿ ಸರಿಸುಮಾರು ಮೂರು ತಾಸುಗಳ ಕಾಲ ಜಗತ್ತಿನ ಕುತೂಹಲ ಸೆಳೆದ ಸೂರ್ಯಗ್ರಹಣವನ್ನು ಈಕ್ಷಿಸಿದರು.
       ಇಡೀ ರಾಜ್ಯದಲ್ಲಿ ಅತ್ಯಧಿಕ ಸ್ಪಷ್ಟತೆಯೊಂದಿಗೆ ಸೂರ್ಯಗ್ರಹಣ ದರ್ಶನವಾಗುವ ಪ್ರದೇಶಗಳಲ್ಲಿ ತೈಕಡಪ್ಪುರಂ ಬೀಚ್ ಒಂದಾಗಿದ್ದುದೂ ಈ ನಿಟ್ಟಿನಲ್ಲಿ ಜನಪ್ರವಾಹ ಹರಿದು ಬರಲು ಕರಣವಾಗಿತ್ತು. ನೀಲೇಶ್ವರ ನಗರಸಭೆ, ಕೋಯಿಕೋಡ್ ವಲಯ ವಿಜ್ಞಾನ ಕೇಂದ್ರ ಆಂಡ್ ಪ್ಲನಿಟೇರಿಯಂ, ಕಾಞಂಗಾಡು ನೆಹರೂ ಕಲಾ-ವಿಜ್ಞಾನ ಕಾಲೇಜಿನ ಭೌತಶಾಸ್ತ್ರ ವಿಭಾಗ, ನೆಯ್ತಲ್ ಕಡಲ ಆಮೆ ಜನನ ಸಂರಕ್ಷಣೆ ಕೇಂದ್ರಗಳ ಜಂಟಿ ವತಿಯಿಂದ ಇಲ್ಲಿ ಸಾರ್ವಜನಿಕ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಕರ್ನಾಟಕದ ಜ್ಞಾನ-ವಿಜ್ಞಾನ ಪರಿಷತ್ ನ ಸಹಕಾರವೂ ಇತ್ತು.
      ಬೆಳಗ್ಗೆ 8.04 ಕ್ಕೆ ಆರಂಭಗೊಂಡ ಸೂರ್ಯಗ್ರಹಣ, 9.24ರ ಹೊತ್ತಗೆ ಪರಿಪೂರ್ಣ ಸ್ವರೂಪಕ್ಕೆ ಬಂದಿತು. 3.12 ನಿಮಿಷ ವರೆಗೆ ಈ ಪೂರ್ಣತೆ ನೆಲೆನಿಂತಿತ್ತು. 11.04ರ ವೇಳೆ ಸಮಾಪ್ತಿಗೊಂಡಿತ್ತು. ಗ್ರಹಣದ ಆರಂಭದ ಹಂತದಲ್ಲಿ ಆಗಾಗ ಕರಿಮೋಡ ಮುಸುಕಿ ಕೊಂಚ ತೊಡಕಾಗಿದ್ದರೂ, ನಂತರ ಬಾನು ತಿಳಿಯಾಗಿತ್ತು.
       ನೀಲೆಶ್ವರ ನಗರಸಭೆ ಅಧ್ಯಕ್ಷ ಪೆÇ್ರ.ಕೆ.ಪಿ.ಜಯರಾಜನ್, ಉಪಾಧ್ಯಕ್ಷೆ ವಿ.ಗೌರಿ, ಸ್ಥಾಯೀ ಸಮಿತಿ ಅಧ್ಯಕ್ಷರಾದ ಎ.ಕೆ.ಕುಂuಟಿಜeಜಿiಟಿeಜಕೃಷ್ಣನ್, ಟಿ.ಪಿ.ಮಹಮ್ಮದ್ ರಾಫಿ, ಪಿ.ಎಂ.ಸಂಧ್ಯಾ, ಸದಸ್ಯರಾದ ಕೆ.ಪಿ.ಸುದಾಕರನ್, ಎಂ.ಲತಾ, ಟಿ.ಪಿ.ಬೀನಾ, ವಿ.ಕೆ.ರಶೀದಾ, ಎನ್.ಪಿ.ಆಯಿಷಾಬಿ, ಕೆ.ತಂಗಮಣಿ, ಕೆ.ಪಿ.ಗೀತಾ, ಕೆ.ಪಿ.ಕರುಣಾಕರನ್, ಸಾಮಾಜಿಕ ಕಾರ್ಯಕರ್ತರಾದ ಕೆ.ಬಾಲಕೃಷ್ಣನ್,ಕೈಪ್ರತ್ ಕೃಷ್ಣನ್ ನಂಬ್ಯಾರ್ ಮೊದಲಾದವರು ನೇತೃತ್ವ ವಹಿಸಿದ್ದರು.
          ತೈಕಡಪ್ಪುರಂನಲ್ಲಿ ಗಮನ ಸೆಳೆದ ವಿದೇಶಿ ತಂಡ:
    ನೀಲೇಶ್ವರದ ತೈಕಡಪ್ಪುರಂ ಬೀಚ್ ನಲ್ಲಿ ಗುರುವಾರ ಜರುಗಿದ ಕಂಕಣ ಸೂರ್ಯಗ್ರಹಣ ವೀಕ್ಷಣೆ ವ್ಯವಸ್ಥೆಯಲ್ಲಿ ಭಾಗವಹಿಸಿದವರಲ್ಲಿ ಕೆಲವುವಿದೇಶೀಯರೂ ಗಮನಸೆಳೆದರು.
 ರಷ್ಯಾದ ಮಾಸ್ಕೋ ದ ಸೈಂಟಿಫಿಕ್  ಟ್ರಾವೆಲ್ ಕ್ಲಬ್ ನ ಆಸ್ರಟೋ ವೆರ್ಟ್ ಸಮಸ್ಥೆಯ ಸಮಸದ್ಯರಾದ ಸ್ಟೆನಿ ಸ್ಲೇವ್, ಎವ್ಗೇನಿ, ಎರಿನಾ ಮಾಕ್ಸ್, ಸರ್ ಗಯ್ ಮತ್ತು ಐಟಿ ಪೆÇ್ರೀಫೆಷನಲ್ಸ್ ಆಗಿರುವ ಪಾಯ್ವನ್, ಉಕ್ರೇನ್ ನಿವಾಸಿ ಐ.ಟಿ.ಪೆÇ್ರಫೆಷನಲ್ ಅಲೆಕ್ಸಂಡರ್ ಗ್ರಹಣ ಈಕ್ಷಣೆ ಮತ್ತು ಅಧ್ಯಯನಕ್ಕೆ ತೈಕಡಪ್ಪುರಂಗೆ ಬಂದಿದ್ದರು.
    ತಾವೂ ವೀಕ್ಷಿಸುವುದರ ಜೊತೆಗೆ ಸಾರ್ವಜನಿಕರು ಫಿಲ್ಟರ್ ಮೂಲಕ ವೈಜ್ಞಾನಿಕ ರೀತಿ ಸೂರ್ಯಗ್ರಹಣ ನೋಡಲು ಈ ತಂಡ ಸಹಕಾರ ನೀಡಿತ್ತು. ಫಿಲ್ಟರ್ ಬಳಸಿ ಮೊಬೈಲ್ ನಲ್ಲಿ ಗ್ರಹಣದ ಚಿತ್ರೀಕರಣ ನಡೆಸಲೂ ಇವರು ಬೆಂಬಲ ನೀಡಿದರು. 2020ರ ಜೂನ್ ತಿಂಗಳಲ್ಲಿ ನಡೆಯುವ ಸೂರ್ಯಗ್ರಹಣ ಈಕ್ಷಣೆಗೆ ದಿಲ್ಲಿಗೆ ಆಗಮಿಸಲಿರುವುದಾಗಿ ಈ ತಂಡದ ನಾಯಕ ಸ್ಟೇನಿ ಸ್ಲೇವ್ ಕೋರೋಡ್ಕಿ ತಿಳಿಸಿದರು.
   ಇವರು ಆಗಮಿಸಿದ್ದ ವಾಹನದಲ್ಲಿ ಗ್ರಹಣ ಬಗ್ಗೆ ಸಮಗ್ರ ಮಾಹಿತಿ ನೀಡಬಲ್ಲ ಎಕ್ಸಿಬಿಷನ್ ಕೂಡ ಇತ್ತು. ಸಾರ್ವಜನಿಕರಿಗೆ ಈ ಬಗ್ಗೆ ವೈಜ್ಞಾನಿಕವಾದ ಅನೇಕ ವಿಚಾರಗಳನ್ನು ತಂಡ ತಿಳಿಸಿಕೊಟ್ಟಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries