ಕಾಸರಗೋಡು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಾಂಗ್ರೆಸ್ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಆರ್‍ಡಿಓ ಕಚೇರಿ ಎದುರು ಪ್ರತಿಭಟನೆ ಶನಿವಾರ ನಡೆಯಿತು. ಕೆಪಿಸಿಸಿ ಅಧ್ಯಕ್ಷ ಮುಲ್ಲಪಳ್ಳಿ ರಾಮಚಂದ್ರನ್ ಧರಣಿ ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್ ಕಾರ್ಯಕರ್ತರ ಕೊನೆಯುಸಿರುವ ತನಕ ಭಾರತದ ಜಾತ್ಯತೀತ ವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಲಾಗುವುದು. ಸ್ವಾತಂತ್ರ್ಯಾನಂತರ ಆರೆಸ್ಸೆಸ್ ಮತ್ತು ಬಿಜೆಪಿಯಿಂದ ದೇಶದ ಜಾತ್ಯತೀತ ವ್ಯವಸ್ಥೆಗೆ ಧಕ್ಕೆ ತರುವ ಹಲವಾರು ಪ್ರಯತ್ನಗಳು ನಡೆದಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೆಚ್ಚಿನ ನಂಬಿಕೆಯರಿಸಿಕೊಂಡುಬಂದಿರುವ ಕಾಂಗ್ರೆಸ್, ಈ ಶ್ರಮವನ್ನು ಸೋಲಿಸಿರುವುದಾಗಿ ತಿಳಿಸಿದರು.
ಡಿಸಿಸಿ ಅಧ್ಯಕ್ಷ ಹಾಕಿಂ ಕುನ್ನಿಲ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಸಿ.ಕೆ ಶ್ರೀಧರನ್, ಗೋವಿಂದನ್ ನಾಯರ್, ಪಿ.ಕೆ ಫೈಸಲ್, ಪಿ.ಜಿ ದೇವ್, ವಕೀಲ ಕೆ.ಕೆ ರಾಜೇಂದ್ರನ್, ವಕೀಲ ಗೋವಿಂದನ್ ನಾಯರ್, ಬಾಲಕೃಷ್ಣನ್ ಪೆರಿಯ, ಗೀತಾಕೃಷ್ಣನ್, ಸೆಬಾಸ್ಟಿಯನ್ ಪತಾಲಿಲ್, ಕರುಣ್ ಥಾಪ, ಸುಂದರ ಆರಿಕ್ಕಾಡಿ, ಎಂ.ಸಿ ಪ್ರಭಾಕರನ್, ಚಂದ್ರಶೇಖರ ರಾವ್, ಕೆ.ವಿ ಗಂಗಾಧರನ್, ಮೀನಾಕ್ಷಿ ಬಾಲಕೃಷ್ಣನ್, ಹರೀಶ್ ಪಿ.ನಾಯರ್ ಮುಂತಾದವರು ಉಪಸ್ಥಿತರಿದ್ದರು.
ಪ್ರತಿಭಟನಾಕಾರರು ಪೊಲೀಸ್ ಬಾರಿಕೇಡ್ ಕೆಡವಿ, ಕಚೇರಿಯೊಳಗೆ ನುಗ್ಗಲು ಪ್ರಯತ್ನಿಸಿದ್ದು, ಇದನ್ನು ಪೊಲೀಸರು ತಡೆದಿದ್ದರು.


