ಕಾಸರಗೋಡು: ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಜಿಲ್ಲೆಯ ದೇವಾಲಯಗಳಲ್ಲಿ ಪೂಜಾ ವೇಳಯಲ್ಲಿ ಬದಲಾವಣೆ ಮಾಡಲಾಗಿದೆ. ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಬೆಳಗ್ಗಿನ ಪೂಜೆ ಬೆಳಗ್ಗೆ 7.30ಕ್ಕೆ ನಡೆಯಲಿದ್ದು, 8ಕ್ಕೆ ಗರ್ಭಗುಡಿ ಬಾಗಿಲು ಮುಚ್ಚಲಾಗುವುದು. ನಂತರ ಸಾಯಂಕಾಲ 6ಕ್ಕೆ ಗರ್ಭಗುಡಿ ಬಾಗಿಲು ತೆರೆಯಲಾಗುವುದು. ಮಧ್ಯಾಹ್ನ ಭೋಜನ ಪ್ರಸಾದ ವಿತರಣೆ ನಡೆಯುವುದಿಲ್ಲೆ ಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
ಪೆರ್ಲ ಸನಿಹದ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ, ಬೇಳ ಕುಮಾರಮಂಗಲ ದೇವಸ್ಥಾನ, ಶ್ರೀಎಡನೀರು ಮಠ, ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮ, ಬಾಯಾರು ಪಂಚಲಿಂಗೇಶ್ವರ, ಮಂಜೇಶ್ವರ ಶ್ರೀಅನಂತೇಶ್ವರ, ಶ್ರೀಕೀರ್ತೇಶ್ವರ, ಮುಳಿಂಜ ಶ್ರೀಕ್ಷೇತ್ರ, ಐಲ ಕ್ಷೇತ್ರ, ಕಣಿಪುರ ಕ್ಷೇತ್ರ, ಅನಂತಪುರ ಶ್ರೀಕ್ಷೇತ್ರ ಸಹಿತ ಎಲ್ಲಾ ದೇವಾಲಯಗಳಲ್ಲಿ ಬೆಳಗ್ಗಿನ ಪೂಜೆ 5.30ಕ್ಕೆ ನಡೆಯಲಿದ್ದು, ಮಧ್ಯಾಹ್ನ ಪೂಜೆ ಮಧ್ಯಾಹ್ನ 1.30ಕ್ಕೆ ನಡೆಯುವುದು. ಬಲಿವಾಡು ಹೊರತುಪಡಿಸಿ, ಇತರ ಸೇವೆಗಳು ಲಭ್ಯವಿರುವುದಾಗಿ ಪ್ರಕಟಣೆ ತಿಳಿಸಿದೆ.


