ಕುಂಬಳೆ: ಬಿಜೆಪಿ ಕುಂಬಳೆ ಪಂಚಾಯತಿ ಸಮಿತಿ ವತಿಯಿಂದ ಕುಂಬಳೆ ಬಿಜೆಪಿ ಕಚೇರಿಯಲ್ಲಿ ಭಾರತ ಕಂಡ ಅಪ್ರತಿಮ ಧೀರ ಧೀಮಂತ ನಾಯಕರು, ಮಾಜಿ ಪ್ರದಾನಿ ದಿ.ಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ ಬುಧವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಮಂಡಲ ಅಧ್ಯಕ್ಷರಾದ ಕೋಳರ್ ಸತೀಶ್ಚಂದ್ರ ಭಂಡಾರಿ ಅವರು ವಹಿಸಿದರು. ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿ ಸದಸ್ಯರಾದ ಸುರೇಶ ಕುಮಾರ್ ಶೆಟ್ಟಿ, ಮಾಜಿ ಜಿಲ್ಲಾ ಅಧ್ಯಕ್ಷರಾದ ವಿ.ರವೀಂದ್ರನ್, ಸುಜಿತ್ ರೈ, ಬಾಬು ಗಟ್ಟಿ, ಪ್ರೇಮಲತಾ ಎಸ್, ಶಶಿ ಕುಂಬಳೆ, ಡಿ.ಎನ್.ಶೆಟ್ಟಿ, ಶರತ್ ಶೆಟ್ಟಿ ಭಾಗವಹಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಮುರಳೀಧರ ಯಾದವ್ ಸ್ವಾಗತಿಸಿ,ಪಂಚಾಯತ್ ಪ್ರಧಾನ ಕಾರ್ಯದರ್ಶಿ ಕೆ.ಸುಧಾಕರ ಕಾಮತ್ ವಂದಿಸಿದರು.


