ಕಾಸರಗೋಡು: ಆದ್ರರ್ಂ ಜನಪರ ಕ್ಯಾಂಪೇನ್ ನ ಅಂಗವಾಗಿ ಜಿಲ್ಲಾ ಆರೋಗ್ಯ ಇಲಾಖೆ, ಚೆರುವತ್ತೂರು ಸಮಾಜ ಆರೋಗ್ಯ ಕೇಂದ್ರ ವತಿಯಿಂದ "ಉತ್ತಮ ಆರೋಗ್ಯಕ್ಕಾಗಿ ಉತ್ತಮ ಆಹಾರ" ಎಂಬ ಸಂದೇಶದೊಂದಿಗೆ ಜ.24ರಂದು ಮಧ್ಯಾಹ್ನ 2 ಗಂಟೆಗೆ ಚೆರುವತ್ತೂರಿನಲ್ಲಿ "ಸ್ಥಳದಲ್ಲೇ ಅವಿಲು ತಯಾರಿ" ಸ್ಪರ್ಧೆ ನಡೆಯಲಿದೆ. ಚೆರುವತ್ತೂರು ಗ್ರಾಮಪಂಚಾಯತ್ ನ 17 ವಾರ್ಡ್ ಗಳಿಂದ ತಲಾ ಇಬ್ಬರ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಮಣ್ಣಿನ ಮಡಕೆ ಯಾ ಸ್ಟೀಲ್ ಪಾತ್ರೆಯಲ್ಲಿ ಅಡುಗೆ ಸಿದ್ಧಪಡಿಸಬೇಕು. ಅಡುಗೆ ಒಲೆ, ನೀರು ಇತ್ಯಾದಿ ಒದಗಿಸಲಾಗುವುದು. ಕಾರ್ಯಕ್ರಮದ ಜೊತೆಗೆ ಜನಜಾಗೃತಿ, ಮರುತ್ತುಕಳಿ, ಪೂರಕ್ಕಳಿ, ಒಪ್ಪನ, ಕಿರು ನಾಟಕಗಳು ಇತ್ಯಾದಿ ನಡೆಯಲಿವೆ. ಸ್ಥಳೀಯ ಸಮಾಜ ಆರೋಗ್ಯ ಕೇಂದ್ರದಲ್ಲಿ ಅನೇಕ ವರ್ಷಗಳಿಂದ ರೋಗಿಗಳಿಗೆ ಅಡುಗೆ ಮಾಡಿ ಕೊಡುತ್ತಿರುವ ಕೆ.ವಿ. ಕಾತ್ರ್ಯಾಯಿನಿ ಅವರು ಸ್ಪರ್ಧೆ ಉದ್ಘಾಟಿಸುವರು. ಸಮಾರೋಪ ಸಮಾರಂಭದಲ್ಲಿ ಬ್ಲೋಕ್ ಪಂಚಾಯತ್ ಅಧ್ಯಕ್ಷೆ ವಿ.ಪಿ.ಜಾನಕಿ ಬಹುಮಾನ ವಿತರಿಸುವರು. ಗ್ರಾಮಪಂಚಾಯತ್ ಅಧ್ಯಕ್ಷ ಮಾಧವನ್ ಮಣಿಯರ ಅಧ್ಯಕ್ಷತೆ ವಹಿಸುವರು.
24ರಂದು ಸ್ಥಳದಲ್ಲೇ ಅವಿಲು ತಯಾರಿಸುವ ಸ್ಪರ್ಧೆ
0
ಜನವರಿ 22, 2020