ಮಂಜೇಶ್ವರ :ಕಾಸರಗೋಡು ಜಿಲ್ಲಾ ಲೈಬ್ರೆರಿ ಕೌನ್ಸಿಲ್ ಸಂಘಟಿಸಿಸುವ ಹೈಯರ್ ಸೆಕೆಂಡರಿ ವಿಭಾಗ ಕನ್ನಡ ವಾಚನ ಸ್ಪರ್ಧೆಯ ಕಾಸರಗೋಡು ಜಿಲ್ಲಾ ಮಟ್ಟದ ಸ್ಪರ್ಧೆಯು ಜ. 25.ರಂದು ಶನಿವಾರ ಬೆಳಿಗ್ಗೆ 10 ರಿಂದ ಕುಂಬಳೆ ಸರ್ಕಾರಿ ಹೈಸ್ಕೂಲಿನಲ್ಲಿ ನಡೆಯಲಿದೆ.
ಮಂಜೇಶ್ವರ, ಕಾಸರಗೋಡು, ಹೊಸದುರ್ಗ ತಾಲೂಕುಗಳಲ್ಲಿ ಪ್ರಥಮ ದ್ವಿತೀಯ ಹಾಗು ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ಶಾಲೆಯ ಪ್ರಾಂಶುಪಾಲರಿಂದ ದೃಡೀಕರಣ ಪತ್ರದೊಂದಿಗೆ ಹಾಜರಾಗಬೇಕಾಗಿ ಹೈಯರ್ ಸೆಕೆಂಡರಿ ವಾಚನ ಸಂಚಾಲಕ ಅಹ್ಮದ್ ಹುಸೈನ್ ತಿಳಿಸಿರುತ್ತಾರೆ. ಕಾರ್ಯಕ್ರಮವನ್ನು ರಾಜ್ಯ ಲೈಬ್ರೆರಿ ಕೌನ್ಸಿಲ್ ಕಾರ್ಯದರ್ಶಿ ನ್ಯಾಯವಾದಿ. ಅಪ್ಪು ಕುಟ್ಟನ್ ಉದ್ಘಾಟಿಸುವರು.

