ಮುಳ್ಳೇರಿಯ: ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಅಂಗ ಸಂಸ್ಥೆಯಾದ ಮುಳ್ಳೇರಿಯಾ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಮಾಸಿಕ ಸಭೆಯು ಕುಂಟಾರಿನ ಗೋಪಾಲಕೃಷ್ಣ ಭಟ್ ಅವರ ಮನೆಯಲ್ಲಿ ಇತ್ತೀಚೆಗೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಸಂಘಟನೆಯ ವಲಯ ಉಪಾಧ್ಯಕ್ಷ ಎಂ.ಶ್ರೀಪತಿ ವಹಿಸಿದ್ದರು. ಇತ್ತೀಚೆಗೆ ಬೃಂದಾವನಸ್ಥರಾದ ಪೇಜಾವರ ವಿಶ್ವೇಶ ತೀರ್ಥರಿಗೆ ಸಭೆಯಲ್ಲಿ ಭಕ್ತಿಪೂರ್ವಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಮಾರ್ಚ್ 8ರಂದು ಬೆಳಗ್ಗೆ 8.30ರಿಂದ ಆದೂರು ಮಲ್ಲಾವರ ಪಂಚಲಿಂಗೇಶ್ವರ ಕ್ಷೇತ್ರದಲ್ಲಿ ಸಮುದಾಯದ ವತಿಯಿಂದ ಧನ್ವಂತರಿ ಹೋಮ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಮಿತಿಯ ನೂತನ ಕಟ್ಟದ ನಿರ್ಮಾಣ ಸಮಿತಿಗೆ ಮುಳ್ಳೇರಿಯ ವಲಯ ಸಮಿತಿಯಿಂದ ಪ್ರಕಾಶ್ ಎ, ಅನಂತರಾಮ ಎಂ. ಹಾಗೂ ಲಕ್ಷ್ಮೀಶ ಕೇಕುಣ್ಣಾಯ ಆಲಂತಡ್ಕ ಅವರನ್ನು ಪ್ರತಿನಿಧಿಗಳನ್ನಾಗಿ ಆರಿಸಲಾಯಿತು. ಸಭೆಯಲ್ಲಿ ಶಿವಳ್ಳಿ ಬ್ರಾಹ್ಮಣ ಸಭಾದ ಜಿಲ್ಲಾ ಅಧ್ಯಕ್ಷೆ ಸತ್ಯಪ್ರೇಮಾ ಭಾರಿತ್ತಾಯ ಉಪಸ್ಥಿತರಿದ್ದರು. ಸಭೆಯಲ್ಲಿ ಮುಳ್ಳೇರಿಯ ವಲಯ ಸಮಿತಿ ಗೌರವಾಧ್ಯಕ್ಷ ಕೃಷ್ಣ ಸರಳಾಯ ಕಾಯರ್ತಿಮಾರು, ವಲಯ ಸಮಿತಿ ಕೋಶಾಧಿಕಾರಿ ಶ್ರೀಪ್ರಸಾದ ಎ, ಸದಸ್ಯರಾದ ಅನಂತರಾಮ ಎಂ, ಗುರುಪ್ರಸಾದ್ ಹೆಬ್ಬಾರ್, ಪದ್ಮನಾಭ ಭಟ್, ಅನಿಲ್ ಕುಮಾರ್ ಸರಳಾಯ, ಅನಸೂಯ ಕೆ, ನಳಿನಾಕ್ಷಿ ಸರಳಾಯ, ಸಜಿತಾ ಪಿ.ಭಟ್, ಸಾವಿತ್ರಿ ವಿ, ಆಕರ್ಷ ಭಟ್, ಯು.ಸುಬ್ರಹ್ಮಣ್ಯ ಮೊದಲಾದವರು ಭಾಗವಹಿಸಿದ್ದರು. ಮುಳ್ಳೇರಿಯ ವಲಯ ಕಾರ್ಯದರ್ಶಿ ಪ್ರಶಾಂತ ರಾಜ ವಿ.ತಂತ್ರಿ ಸ್ವಾಗತಿಸಿ, ವಂದಿಸಿದರು. ಸಂಘಟನೆಯ ಮುಂದಿನ ಸಭೆಯು ಫೆ.9ರಂದು ಆಲಂತಡ್ಕದ ಬಾಲಕೃಷ್ಣ ಕೇಕುಣ್ಣಾಯರ ಮನೆಯಲ್ಲಿ ನಡೆಸಲು ನಿರ್ಧರಿಸಲಾಯಿತು.


