ಬದಿಯಡ್ಕ: ಸ್ಥಾನಿಕ ಬ್ರಾಹ್ಮಣ ಮಹಾಮಂಡಲ ಮಂಗಳೂರು ಇದರ ವಿಶ್ವ ಸ್ಥಾನಿಕ ಬ್ರಾಹ್ಮಣ ಸಮಾವೇಶ 2020 ಕಾರ್ಯಕ್ರಮವು ಬೆಂಗಳೂರಿನ ಜ್ಞಾನಶಕ್ತಿ ಮಂಟಪದಲಲಿ ಜ.11 ಹಾಗೂ 12 ರಂದು ನಡೆಯಿತು. ಸಮಾರಂಭದಲ್ಲಿ ಕಾಸರಗೋಡು ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪೆÇ್ರ. ಎ. ಶ್ರೀನಾಥ್ ಆವರನ್ನು ಸನ್ಮಾನಿಸಲಾಯಿತು.
ಎನ್.ಎಸ್.ಎಸ್.ನ ಅವಿಶ್ರಾಂತ ದುಡಿಮೆ, ಸಾಮಾಜಿಕ ಸಾಂಸ್ಕøತಿಕ ಸಾಹಿತ್ಯಿಕ ಕಾರ್ಯಕ್ರಮಗಳ ಸಂಘಟಕ, ಕರ್ನಾಟಕ ಜಾನಪದ ಪರಿಷತ್ತು ಕೇರಳ ಘಟಕದ ಗೌರವ ಸಲಹೆಗಾರ, ಕನ್ನಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಉಪಾಧ್ಯಕ್ಷರಾಗಿ ನೀಡುತ್ತಿರುವ ಸೇವೆಗಳಿಗಾಗಿ ಈ ಪ್ರಶ್ತಿಯನ್ನು ಅವರಿಗೆ ಪ್ರದಾನಗೈಯ್ಯಲಾಯಿತು. ಸಮ್ಮೇಳನದ ಅಧ್ಯಕ್ಷ ರವೀಂದ್ರನಾಥ ರಾವ್ ಬೆಳ್ಳೆ, ಸಭಾಧ್ಯಕ್ಷ ಎನ್.ಕೆ.ಜಗನ್ನಿವಾಸ ರಾವ್ ಉಪಸ್ಥಿತರಿದ್ದ ಸಮಾರಂಭದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ವಕೀಲ ಅಶೋಕ ಹಾರನಹಳ್ಳಿ, ಡಿಆರ್‍ಡಿಓದ ನಿರ್ವರತ್ತ ಅಧಿಕಾರಿ ಡಾ.ಕೋಲ್ಪೆ ರಾಧಾಕೃಷ್ಣ, ಉದ್ಯಮಿ ಗಿರೀಶ್ ರಾವ್ ಕಾವು, ವೇದಮೂರ್ತಿ ಪಾವಂಜೆ ವಾಗೀಶ ಶಾಸ್ತ್ರಿ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.


