ಬದಿಯಡ್ಕ: ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಡಿ.17ರಿಂದ ಆರಂಭವಾದ ಧನುಪೂಜಾ ಮಹೋತ್ಸವವು ಮಕರ ಸಂಕ್ರಮಣದಂದು ಸಂಪನ್ನವಾಯಿತು.
ಪ್ರತೀ ದಿನ ಬೆಳಗಿನ ಜಾವ ವಿವಿಧ ಕಡೆಗಳಿಂದ ಭಕ್ತಾದಿಗಳು ಪೂಜೆಯನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಿದ್ದರು. ವಿವಿಧ ಭಜನ ಸಂಘಗಳಿಂದ ಭಜನ ಸೇವೆ ಹಾಗೂ ದೇವರಿಗೆ ವಿಶೇಷ ಅಲಂಕಾರವನ್ನು ಮಾಡಲಾಗುತ್ತಿತ್ತು. ಸಮಾರೋಪದಂದು ತಂತ್ರಿವರ್ಯ ಬ್ರಹ್ಮಶ್ರೀ ಉಳಿಯ ವಿಷ್ಣು ಆಸ್ರ ಭಕ್ತಾದಿಗಳನ್ನುದ್ದೇಶಿಸಿ ಆಶೀರ್ವಚನ ನುಡಿಗಳನ್ನಾಡಿ ಮನೋವಿಕಾಸ, ಬೌದ್ಧಿಕ ಚಿಂತನೆಗಳು ಜಾಗೃತವಾಗಲು ಭಜನೆ ಮುಂತಾದ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ತನ್ಮೂಲಕ ನಮ್ಮೊಳಗಿನ ಆತ್ಮಚೈತನ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದರು. ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.


