ಬದಿಯಡ್ಕ: ಇಂಡಿಯನ್ ಮೀಟ್ರೋಲೋಜಿಕಲ್ ಡಿಪಾರ್ಟ್‍ಮೆಂಟ್‍ನಿಂದ ಶ್ರೇಷ್ಠ ಉದ್ಯೋಗಿ ಮಾನ್ಯತೆ ಪಡೆದ ಐ.ಎಮ್.ಪಿ. ಸಂಸ್ಥೆಯ ವಿಜ್ಞಾನಿ ಅಶ್ವಿನ್ ರಾಜು ಡಿ.ಕೆ ಅವರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಧೂರು ಶ್ರೀ ಮದರು ಮಹಾ ಮಾತೆ ಮೊಗೇರ ಸಮಾಜದ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಹಾರಹಾಕಿ ಸ್ವಾಗತಿಸಿ, ಅಭಿನಂದನೆಯನ್ನು ಸಲ್ಲಿಸಲಾಯಿತು.
ದೆಹಲಿಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಅವರು ಪ್ರಶಸ್ತಿಯನ್ನು ಪಡೆದಿದ್ದರು. ಅಶ್ವಿನ್ ರಾಜು ಅವರು ಮದರು ಮಹಾಮಾತೆ ಮೊಗೇರ ಸಮಾಜದ ಹಿರಿಯ ಸಲಹೆಗಾರ, ನಿವೃತ್ತ ಗ್ರಾಮಾಧಿಕಾರಿ ಕೃಷ್ಣ ಧರ್ಬೆತ್ತಡ್ಕರವರ ಪುತ್ರ. ಇತ್ತೀಚೆಗೆ ಜಪಾನ್‍ನಲ್ಲಿ ನಡೆದ 39ನೇ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ರಾಡಾರ್ ಟೆಕ್ನೋಲಜಿ ಬಗ್ಗೆ ಭಾರತದ ಪ್ರತಿನಿಧಿಯಾಗಿ ಪ್ರಬಂಧ ಮಂಡಿಸಿದ್ದರು. ಮದರು ಮಹಾ ಮಾತೆ ಮೊಗೇರ ಸಮಾಜದ ಜಿಲ್ಲಾಧ್ಯಕ್ಷ ವಸಂತ ಅಜಕ್ಕೋಡು, ಪ್ರಧಾನ ಕಾರ್ಯದರ್ಶಿ ಶಂಕರ ಡಿ. ದರ್ಭೆತ್ತಡ್ಕ, ಉಪಾಧ್ಯಕ್ಷ ಸುರೇಶ ಅಜಕ್ಕೋಡು, ಕೋಶಾಧಿಕಾರಿ ಕೃಷ್ಣದಾಸ್ ಡಿ., ಸಲಹೆಗಾರರಾದ ಕೃಷ್ಣ ಡಿ. ಧರ್ಬೆತ್ತಡ್ಕ, ರಾಮಪ್ಪ ಮಂಜೇಶ್ವರ, ರಾಧಾಕೃಷ್ಣ ಕೆ. ಉಳಿಯತ್ತಡ್ಕ, ನಿಟ್ಟೋಣಿ ಬಂದ್ಯೋಡು, ರಾಮ ಪಟ್ಟಾಜೆ ಮೊದಲಾದವರ ನೇತೃತ್ವದಲ್ಲಿ ಸ್ವಾಗತಿಸಲಾಯಿತು.


