HEALTH TIPS

ಮಂಜೇಶ್ವರದ ನಿರೀಕ್ಷೆಯಾಗಿ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನ ನೂತನ ಕಟ್ಟಡ-ಇಂದು ಲೋಕಾರ್ಪಣೆ

         ಮಂಜೇಶ್ವರ: ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನ ನೂತನ ಕಟ್ಟಡವನ್ನು ಇಂದು(ಶುಕ್ರವಾರ) ರಾಜ್ಯ ಉನ್ನತ ವಿದ್ಯಾಭ್ಯಾಸ ಸಚಿವ ಕೆ.ಟಿ.ಜಲೀಲ್ ಉದ್ಘಾಟಿಸುವರು.
       ಗಡಿನಾಡು ಕಾಸರಗೋಡಿನ ವಿದ್ಯಾಭ್ಯಾಸ ಸೌಕರ್ಯಗಳ ಉನ್ನತಿಗಾಗಿ 1980  ಸೆಪ್ಟೆಂಬರ್ 22 ರಂದು ಅಂದಿನ ಮುಖ್ಯಮಂತ್ರಿಯಾಗಿದ್ದ ಇ.ಕೆ ನಾಯನಾರ್ ರವರು ವಿದ್ಯಾಲಯದ ಉದ್ಘಾಟನೆಯನ್ನು ನಿರ್ವಹಿಸಿದ್ದರು. ಈ ವಿದ್ಯಾಲಯದ ಆರಂಭವು ಅನಂತೇಶ್ವರ ದೇವಾಲಯಕ್ಕೆ ಸಂಬಂಧಿಸಿದ "ವನ ಭೋಜನ ಶಾಲೆ " ಎಂಬ ಸ್ಥಳದಲ್ಲಿ ನಡೆದಿತ್ತು. ಈ ಸಂದರ್ಭದಲ್ಲಿ ಸಮಾಜದ ಅಭಿವೃದ್ಧಿ ಪರವಾಗಿ ಚಿಂತಿಸುವ ಜನತೆಗೆ ವಿದ್ಯಾಭ್ಯಾಸವನ್ನು ನೀಡಬೇಕೆಂಬ ಆಸಕ್ತಿಯಿಂದ ರಾಷ್ಟ್ರಕವಿ ಗೋವಿಂದ ಪೈಗಳು ಹೊಸಬೆಟ್ಟು ಗ್ರಾಮದಲ್ಲಿ ತನ್ನ ಅಧೀನತೆಯಲ್ಲಿದ್ದ 33 ಹೆಕ್ಟೇರ್ ಭೂಮಿಯನ್ನು ವಿದ್ಯಾ ಸಂಸ್ಥೆಯ ನಿರ್ಮಾಣ ಸ್ಥಳಕ್ಕಾಗಿ ದಾನ ಮಾಡಿದ್ದರು. ಪ್ರಸ್ತುತ ಆ ನಿವೇಶನದಲ್ಲಿ ಸ್ಮಾರಕ ಕಾಲೇಜು ನೆಲೆನಿಂತಿದೆ.
           ವನ ಭೋಜನ ಶಾಲೆ ಎಂಬಲ್ಲಿದ್ದ ತಾತ್ಕಾಲಿಕ ಕಾಲೇಜನ್ನು ಬಳಿಕ 1990ರಲ್ಲಿ ನೂತನ  ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ಕೇರಳದಲ್ಲಿರುವ ಬೇರೆ ಯಾವುದೇ ವಿದ್ಯಾಲಯಕ್ಕೂ ಇಲ್ಲದ ಪ್ರಕೃತಿ ರಮಣೀಯವಾದ ಭೂ ಸಂಪತ್ತು ಇಲ್ಲಿಯದ್ದಾಗಿದ್ದು, ಸ್ವಚ್ಚತೆಗೆ ಹೆಸರು ಪಡೆದಿರುವ ಗ್ರಾಮೀಣ ಪ್ರದೇಶದ ಪರಿಸರದಲ್ಲಿದೆ ಈ ವಿದ್ಯಾ ಸಂಸ್ಥೆ.
      ಪ್ರಸ್ತುತ ಇಲ್ಲಿ ಬಿ.ಕಾಂ, ಬಿಎಸ್ಸಿ ಸ್ಟಾಟಿಸ್ಟಿಕ್ಸ್, ಎಂ.ಎ. ಕನ್ನಡ, ಟ್ರಾವೆಲ್ ಆಂಡ್ ಟೂರಿಸಂ ಎಂಬ ವಿಷಯಗಳಲ್ಲಿ ಪದವಿ, ಸ್ಟಾಟಿಸ್ಟಿಕ್ಸ್, ಬಿ.ಕಾಂಗಳಲ್ಲಿ ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸವು ಇದೆ. ಪೂರ್ಣ ಕಾಲಿಕ 19 ಉಪನ್ಯಾಸಕರು, 9 ಮಂದಿ ಅತಿಥಿ ಉಪನ್ಯಾಸಕರು ಹಾಗೂ ಸಂಶೋಧನಾ ಸಹಾಯಕರು, ಜೀವನಿ ಕೌನ್ಸಲಿಂಗ್ ಎಂಬ ಸೇವೆಗಳೂ ಲಭ್ಯವಿದೆ. ಗಿಳಿವಿಂಡು, ಫೆÇೀಕಸ್, ಕ್ಯೂಟ್, ಸ್ಟಾಟಿಸ್ಟಿಕಾ ಮೊದಲಾಗಿ ವಿಭಾಗದ ಸಂಘಗಳೂ, ಓಲ್ಡ್ ಗಾರ್ಡಾನ್ ಮೊದಲಾದ ಸಾಹಿತ್ತಿಕ ಸಾಂಸ್ಕೃತಿಕ ಸಂಘಗಳು ಇಲ್ಲಿ ಸಜೀವವಾಗಿ ಕಾರ್ಯವೆಸಗುತ್ತಿದೆ. ಜೊತೆಗೆ ಗುರುವಾರ ಚಿಂತನೆಗಳು ಎಂಬ ಸಂವಾದ ವೇದಿಕೆ, ರಾಷ್ಟ್ರೀಯ ಸೇವಾ ಯೋಜನೆಯು (ಎನ್ ಎಸ್ ಎಸ್) ಕಾರ್ಯ ನಿರ್ವಹಿಸುತ್ತದೆ. ವಿದ್ಯಾರ್ಥಿಗಳಿಗೆ ವಿವಿಧ ಪರೀಕ್ಷೆಗಳಿಗೆ ಅಪೇಕ್ಷಿಸುವಲ್ಲಿ ಮತ್ತು ಅನುಬಂಧದ ತಯಾರಿಕೆಗಾಗಿ ನೆಟ್ವರ್ಕ್ ರಿಸೋರ್ಸ್ ಸೆಂಟರುಗಳು ಇಲ್ಲಿವೆ.
     2017 ರಲ್ಲಿ " ಬಿ  ಗ್ರೇಡ್ "ಪಡೆದು ಯು . ಜಿ . ಸಿ ಯ ನ್ಯಾಕ್ ಅಂಗೀಕಾರವನ್ನು ಈ ಕಾಲೇಜು ಪಡೆದಿದೆ.  40 ಸಾವಿರಕ್ಕೂ ಹೆಚ್ಚು ಪುಸ್ತಕಗಳಿರುವ ಗ್ರಂಥಾಲಯವು ಈ ಕಾಲೇಜಿನಲ್ಲಿದೆ. ವಿಶ್ವ ವಿದ್ಯಾನಿಲಯದ ಕನಿಷ್ಠ ಶೇಕಡಾವಾರಿಗಿಂತ ಹೆಚ್ಚಿನ ಸಾಧನೆಯನ್ನು ಇಲ್ಲಿನ ವಿದ್ಯಾರ್ಥಿಗಳು ದಾಖಲಿಸಿದ್ದಾರೆ. ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಯು . ಜಿ .ಸಿ ನೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಹೀಗೆ ಕಲಿಕೆಯ ಮತ್ತು ಸಾಂಸ್ಕೃತಿಕ ವಿಚಾರಗಳಲ್ಲಿ ಹಿರಿಮೆಯನ್ನು ಈ ಕಾಲೇಜು ಪಡೆದಿದ್ದರೂ ಕೇರಳದ ಇತರ ಕಾಲೇಜುಗಳೊಂದಿಗೆ ಹೋಲಿಸಿದಾಗ ಈ ಕಾಲೇಜು ಸರ್ಕಾರದಿಂದ ಪರಿಗಣಿಸಲ್ಪಟ್ಟಿಲ್ಲ ಎಂದು ಮನದಟ್ಟಾಗುತ್ತಿದೆ. ಹೊಸ ಕೋರ್ಸಗಳು ಇಲ್ಲಿ ಲಭ್ಯವಾಗಬೇಕಿದೆ. ಕಾಸರಗೋಡಿನ ಸಮಗ್ರ ಅಭಿವೃದ್ಧಿಗಾಗಿ ರೂಪುಗೊಂಡ " ಪ್ರಭಾಕರನ್ ಕಮಿಷನ್ " ವರದಿಯಲ್ಲಿ ಉಲ್ಲೇಖಿಸಿರುವ ಕೋರ್ಸುಗಳು ಭಾಷಾ ಅಲ್ಪ ಸಂಖ್ಯಾತರು ಅಧಿಕವಾಗಿರುವ ಈ ಪ್ರದೇಶದ ವಿದ್ಯಾ ಸಂಸ್ಥೆಯನ್ನು ತಲುಪಬೇಕಾಗಿದೆ. ವಿದ್ಯಾಲಯದ ಅಧಿಕೃತರು ಈ ಕುರಿತಾದ ಮನವಿಯನ್ನು ಸರಕಾರಕ್ಕೆ ಸಲ್ಲಿಸಿದ್ದರೂ ಕಾರ್ಯರೂಪಕ್ಕೆ ಬಂದ್ದಿಲ್ಲ. 2012 ರಲ್ಲಿ ಎಮ್ . ಎಸ್ . ಸಿ ಸ್ಟಾಟಿಸ್ಟಿಕ್ಸ್ ಇಲ್ಲಿ ಆರಂಭಗೊಂಡಿತು. ನೂತನ ಕಟ್ಟಡದ ಉದ್ಘಾಟನೆಯೊಂದಿಗೆ ಹೊಸ ಕೋರ್ಸುಗಳು ಇಲ್ಲಿ ಲಭ್ಯವಾಗಲಿದೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ದೂರದ ಮಂಗಳೂರನ್ನು ಆಶ್ರಯಿಸುವ ಜನರಿಗೆ ಅದು ಇಲ್ಲೆ ದೊರೆಯಲಿದೆ. ಆದುದರಿಂದ ಉತ್ತಮ ಕೋರ್ಸುಗಳು ಇಲ್ಲಿ ಬರಬೇಕಾದ ಅತ್ಯಗತ್ಯವಿದೆ.
       ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಉಪಸ್ಥಿತರಿರುವರು. ಶಾಸಕ ಎಂ.ಸಿ. ಖಮರುದ್ದೀನ್ ರವರು ಅಧ್ಯಕ್ಷತೆ ವಹಿಸುವರು. ಕಟ್ಟಡದ ಉದ್ಘಾಟನೆಯೊಂದಿಗೆ ಹೊಸ ಕೋರ್ಸುಗಳು ಬರುವ ನಿರೀಕ್ಷೆಯಲ್ಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries