ಉಪ್ಪಳ: ಪೆರ್ವೊಡಿ ಚಿತ್ರಮೂಲದಲ್ಲಿರುವ ವೇದ ಶ್ರೀ ಕಾಳಿಕಾಂಬ ಮಠದಲ್ಲಿ ಶುಕ್ರವಾರದಿಂದ ಭಜನಾ ಸಪ್ತಾಹ ಆರಂಭಗೊಂಡಿತು. ಶ್ರೀ ಕಾಳಿಕಾತನಯ ಶ್ರೀ ಉಮಾಮಹೇಶ್ವರ ತೀರ್ಥರು ದೀಪಪ್ರಜ್ವಲನದೊಂದಿಗೆ ಭಜನಾ ಸಪ್ತಾಹಕ್ಕೆ ಚಾಲನೆ ನೀಡಿದರು.
ಮೊದಲ ದಿನದ ಭಜನಾ ಸೇವೆಯನ್ನು ಶ್ರೀ ಮೂಕಾಂಬಿಕಾ ಭಜನಾ ಮಂಡಳಿ ಬೆರಿಪದವು ಇದರ ಸದಸ್ಯರು ನಡೆಸಿದರು.