ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಕೇರಳ ದಿನೇಶ್ ಬೀಡಿಯ 50ನೇ ವರ್ಷಾಚರಣೆಯ ಸಮಾರೋಪ ಸಮಾರಂಭವು ಶನಿವಾರ ಬದಿಯಡ್ಕ ತಾಜ್ ಕಾಂಪ್ಲೆಕ್ಸ್‍ನಲ್ಲಿ ಜರಗಿದ್ದು, ಈ ಸಂದರ್ಭದಲ್ಲಿ ಸಂಸ್ಥೆಯ ಉನ್ನತಿಗಾಗಿ ದುಡಿದ ಹಿರಿಯರಾದ ಪಿ.ಎನ್.ಆರ್.ಅಮ್ಮಣ್ಣಾಯ ಅವರನ್ನು ಕೇರಳ ಸರಕಾರದ ಕಂದಾಯ ಖಾತೆ ಸಚಿವ ಇ. ಚಂದ್ರಶೇಖರನ್ ಅವರು ಸಂಸ್ಥೆಯ ವತಿಯಿಂದ ಸನ್ಮಾನಿಸಿದರು.