ಕಾಸರಗೋಡು: ಇತ್ತೀಚೆಗೆ ಪಯ್ಯನ್ನೂರಿನಲ್ಲಿ ನಡೆದ ಕಣ್ಣೂರು ವಿಶ್ವವಿದ್ಯಾನಿಲಯ ಕಲೋತ್ಸವದ ಕನ್ನಡ ನಾಟಕ ಸ್ಪರ್ಧೆಯಲ್ಲಿ ಉತ್ತಮ ನಟಿ ಪುರಸ್ಕಾರವನ್ನು ಕಾಸರಗೋಡು ಸರಕಾರಿ ಕಾಲೇಜಿನ ದ್ವಿತೀಯ ಸ್ನಾತಕೋತ್ತರ ವಿದ್ಯಾರ್ಥಿನಿ ಅನುರಾಧ ಕಲ್ಲಂಗೋಡ್ಲು ಪಡೆದಿದ್ದಾರೆ. ಪ್ರಶೋಬ್ ಬಾಲನ್ ಅವರ ನಿರ್ದೇಶನದ 'ಬಣ್ಣಗಳು' ಎಂಬ ನಾಟಕದ ಮಲ್ಲಿ ಪಾತ್ರದಲ್ಲಿ ಅನುರಾಧರಿಗೆ ಉತ್ತಮ ನಟಿ ಪುರಸ್ಕಾರವು ಲಭಿಸಿದೆ. ಇವರು ಕಲ್ಲಂಗೋಡ್ಲು ರಾಮ ಮಣಿಯಾಣಿ ಹಾಗು ಕುಸುಮಾ ದಂಪತಿಯ ಪುತ್ರಿಯಾಗಿದ್ದಾರೆ. ಅನುಪ್ರಿಯ ಸಹೋದರಿ.
ಬಿ.ಎ ಪದವಿಯಲ್ಲಿ ದ್ವಿತೀಯ ರ್ಯಾ ಂಕ್ ಪಡೆದುಕೊಂಡಿದ್ದಾರೆ. ಸರಕಾರಿ ಕಾಲೇಜಿನ ಯಕ್ಷಗಾನ ಸಂಶೋಧನ ಕೇಂದ್ರವು ಎಡನೀರಿನಲ್ಲಿ ನಡೆಸಿದ ಒಂದು ತಿಂಗಳ ಯಕ್ಷಗಾನ ತರಬೇತಿಯಲ್ಲಿ ಭಾಗವಹಿಸಿದ್ದಾರೆ. ನಾಟಕ, ಯಕ್ಷಗಾನಗಳಲ್ಲೂ, ಸಾಹಿತ್ಯ ಬರಹಗಳಲ್ಲೂ ಆಸಕ್ತೆಯಾದ ಇವರು ಪ್ರಸ್ತುತ ಸರ್ಕಾರಿ ಕಾಲೇಜಿನ ಸಾಹಿತ್ಯಕ ಸಾಂಸ್ಕøತಿಕ ವೇದಿಕೆಯಾದ ಸ್ನೇಹರಂಗದ ಅಧ್ಯಕ್ಷೆಯಾಗಿದ್ದಾರೆ. ಸಿರಿಚಂದನ ಕನ್ನಡ ಯುವಬಳಗದ ಸದಸ್ಯೆ. ಎ.ಎಲ್.ಪಿ ಶಾಲೆ ಪುಂಡೂರು,ಜಿ.ವಿ.ಎಚ್.ಎಸ್.ಎಸ್ ಕಾರಡ್ಕ, ಸ್ವಾಮೀಜಿಸ್ ಎಡನೀರು ಇಲ್ಲಿನ ಹಳೆ ವಿದ್ಯಾರ್ಥಿನಿ.


