ಮುಳ್ಳೇರಿಯ: ಯಕ್ಷಗಾನ ನಾಟ್ಯ ತರಬೇತಿಯ ಉದ್ಘಾಟನಾ ಸಮಾರಂಭ ನೆಟ್ಟಣಿಗೆ ಸಮುದಾಯ ಭವನದಲ್ಲಿ ಗುರುವಾರ ಸಂಜೆ ನಡೆಯಿತು.
ಬೆಳ್ಳೂರು ಗ್ರಾ.ಪಂ.ಅಧ್ಯಕ್ಷೆ ಲತಾ ಯುವರಾಜ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.ಪಂಚಾಯಿತಿ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಗೀತಾ ಕೆ.ಅಧ್ಯಕ್ಷತೆ ವಹಿಸಿದರು.ವಾರ್ಡ್ ಪ್ರತಿನಿಧಿ ರಾಧಾ ವಿ.ಶುಭ ಹಾರೈಸಿದರು. ಯಕ್ಷಗಾನ ನಾಟ್ಯ ಗುರು ಚಂದ್ರಶೇಖರ ಯಕ್ಷಗಾನ ಕಲೆ ಹಾಗೂ ಪರಂಪರೆಯನ್ನು ವಿವರಿಸಿದರು.ಪುಷ್ಪಲತ, ನಿಶಾಪ್ರಭಾ ಉಪಸ್ಥಿತರಿದ್ದರು.ನಾಟ್ಯ ತರಬೇತಿ ಸಂಯೋಜಕ ಶ್ರೀಹರ್ಷ ನಿರೂಪಿಸಿದರು.
ಎಲ್ಲಾ ಭಾನುವಾರಗಳಂದು ಮಧ್ಯಾಹ್ನ 1ರಿಂದ ನೆಟ್ಟಣಿಗೆ ಸರಕಾರಿ ಶಾಲೆಯಲ್ಲಿ ತರಬೇತಿ ನಡೆಯಲಿದೆ.


