ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಾಯ ಕ್ಷೇತ್ರ ಸಭಾಂಗಣದಲ್ಲಿ 12ನೇ ವರ್ಷದ ಪುರಂದರ ದಾಸರ ಆರಾಧನೋತ್ಸವ ಜರಗಿತು.
ಬೆಳಗ್ಗೆ ದೇವತಾ ಪಾರ್ಥನೆ ನೆರವೇರಿತು.ಕ್ಷೇತ್ರ ಅರ್ಚಕರಾದ ನಾರಾಯಣ ಮಯ್ಯ ದೀಪ ಪ್ರಜ್ವಲನೆ ಮಾಡಿದರು. 9 ರಿಂದ 11ಗಂಟೆ ವರೆಗೆ ಹೊಸದಾಗಿ ಭಜನಾ ತರಬೇತಿ ಪಡೆದು ರಚನೆಗೊಂಡ ವಿವಿಧ ಭಜನಾ ಮಂಡಳಿಯಿಂದ ಭಜನೆ ನಡೆಯಿತು. 11.30 ರಿಂದ 1ರ ವರೆಗೆ ಸ್ವಸ್ಥ ಸಮಾಜ,ಸಾಮಾಜಿಕ ಪರಿವರ್ತನೆಯ ಕನಸು ಹೊತ್ತು "ಕತ್ತಲ ಹಾಡು" ಎಂಬ ವಿನೂತನ ತಂಬೂರಿ ಹಾಡಿನ ಮೂಲಕ ಕರ್ನಾಟಕ ಯಾತ್ರೆಗೈಯುತ್ತಿರುವ ಸಂತ ನಾದಮಣಿ ನಾಲ್ಕೂರು ಇವರಿಂದ "ಕತ್ತಲ ಹಾಡಿನಲ್ಲಿ ನಾದದ ಅಲೆ" ದಾಸರ ಪದ-ನುಡಿ ವ್ಯಾಖ್ಯಾನ ವಿನೂತನ ಶೈಲಿಯ ಕಾರ್ಯಕ್ರಮ ಪ್ರಸ್ತುತಗೊಂಡಿತು.ನೆರೆದ ಸಮಸ್ತ ಮಹಿಳಾ ಭಜನಾ ಸದಸ್ಯೆಯರಿಂದ ಹಾಗೂ ಸಮಿತಿಯವರಿಂದ ಸಮೂಹ ಹರಿನಾಮ ಸಂಕೀರ್ತನೆ ನಡೆಯಿತು.


