ಬದಿಯಡ್ಕ: ಮುನಿಯೂರು ಬೊಳ್ಳೂರು ಶ್ರೀ ಸದಾಶಿವ ದೇವಸ್ಥಾನದಲ್ಲಿ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳವರ ನೇತೃತ್ವದಲ್ಲಿ ಇತ್ತೀಚೆಗೆ ಸಾಮೂಹಿಕ ಶ್ರೀ ಶನೀಶ್ವರ ಪೂಜೆ ಜರಗಿತು. ಈ ಸಂದರ್ಭದಲ್ಲಿ ಬದಿಯಡ್ಕ ಶ್ರೀಮಾತಾ ಹವ್ಯಕ ಭಜನ ಸಂಘದವರಿಂದ ಭಜನ ಸೇವೆ, ಭಜನ ಗುರುಗಳಾದ ಮಧ್ವಾಧೀಶ ವಿಠಲದಾಸ ನಾಮಾಂಕಿತ ರಾಮಕೃಷ್ಣ ಕಾಟುಕುಕ್ಕೆ ಅವರನ್ನು ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಬೊಳ್ಳೂರು ಸುಬ್ರಹ್ಮಣ್ಯ ಭಟ್ ಸ್ವರ್ಣಲತ ದಂಪತಿಗಳು ಶಾಲು ಹೊದೆಸಿ ಫಲಪುಷ್ಪಗಳನ್ನಿತ್ತು ಗೌರವಿಸಿದರು. ಭಜನ ಸಂಘದ ಸದಸ್ಯರು, ದೇವಸ್ಥಾನದ ಭಕ್ತಾದಿಗಳು ಜೊತೆಗಿದ್ದರು.
ಭಜನ ಗುರು ಶ್ರೀ ಮಧ್ವಾಧೀಶ ವಿಠಲದಾಸ ರಾಮಕೃಷ್ಣ ಕಾಟುಕುಕ್ಕೆಯವರಿಗೆ ಸನ್ಮಾನ
0
ಜನವರಿ 25, 2020