ಕಾಸರಗೋಡು: ವಿವೇಕಾನಂದ ನಗರ ರೆಸಿಡೆನ್ಸ್ ಅಸೋಸಿಯೇಶನ್‍ನ ದ್ವಿತೀಯ ವಾರ್ಷಿಕೋತ್ಸವ ಹಾಗು ಕುಟುಂಬ ಸಂಗಮವು ವಿವೇಕಾನಂದ ನಗರದ ಅಂಗನವಾಡಿ ಪರಿಸರದಲ್ಲಿ ಜರಗಿತು.
ಅಸೋಸಿಯೇಶನ್‍ನ ಅತೀ ಹಿರಿಯ ಸದಸ್ಯೆಯಾದ ಲಕ್ಷ್ಮೀ ಅಮ್ಮ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಸೋಸಿಯೇಶನ್‍ನ ಜಿಲ್ಲಾಧ್ಯಕ್ಷ ಕೆ.ವಿ.ಕೋಮನ್ ಅಧ್ಯಕ್ಷತೆ ವಹಿಸಿದ್ದರು. ಅಸೋಸಿಯೇಶನ್‍ನ ಹಿರಿಯ ಸದಸ್ಯರಾದ ಲಕ್ಷ್ಮೀ ಅಮ್ಮ, ಚಂದ್ರಶೇಖರ, ಕಮಲಮ್ಮ, ಸುಶೀಲ ಅಮ್ಮ, ಪುಷ್ಪಾವತಿ ಅಮ್ಮ, ರಾಮದಾಸ ಶೆಟ್ಟಿ ಅವರನ್ನು ಇದೇ ಸಂದರ್ಭದಲ್ಲಿ ಶಾಲು ಹೊದಿಸಿ, ಫಲಪುಷ್ಪಗಳನ್ನು ನೀಡಿ ಗೌರವಿಸಲಾಯಿತು.
ಪ್ರಸಕ್ತ ವರ್ಷದಲ್ಲಿ ಸಾವನ್ನಪ್ಪಿದವರನ್ನು ಸ್ಮರಿಸುವ ಸಂತಾಪ ಸೂಚಕ ಠರಾವನ್ನು ಜೋಸಿ ಕುರ್ಯಾಕೋಸ್ ಮಂಡಿಸಿದರು. ವಾರ್ಷಿಕ ವರದಿಯನ್ನು ಕಾರ್ಯದರ್ಶಿ ವಿದ್ಯಾಶಂಕರಿ ಟೀಚರ್ ಮಂಡಿಸಿದರು. ಲೆಕ್ಕಪತ್ರವನ್ನು ಕೋಶಾ„ಕಾರಿ ರಘುಧರನ್ ಮಂಡಿಸಿದರು. ವಾರ್ಷಿಕೋತ್ಸವದ ಅಂಗವಾಗಿ ಮಕ್ಕಳು, ಮಹಿಳೆಯರು, ಪುರುಷರಿಗೆ ವಿವಿಧ ಸ್ಪರ್ಧೆಗಳು ಜರಗಿತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಅಧ್ಯಕ್ಷ ಕೆ.ವಿ.ಕೋಮನ್ ಬಹುಮಾನ ವಿತರಿಸಿದರು.
ಅಸೋಸಿಯೇಶನ್‍ನ ನೂತನ ಪದಾ„ಕಾರಿಗಳಾಗಿ ಪಿ.ಬಾಲಕೃಷ್ಣನ್(ಅಧ್ಯಕ್ಷ), ಲಕ್ಷ್ಮೀ ಟೀಚರ್(ಉಪಾಧ್ಯಕ್ಷೆ), ಉಣ್ಣಿಕೃಷ್ಣನ್(ಕಾರ್ಯದರ್ಶಿ), ಮಮತಾ(ಜತೆ ಕಾರ್ಯದರ್ಶಿ), ಶಶಿಕಲ (ಕೋಶಾ„ಕಾರಿ) ಅವರನ್ನು ಆರಿಸಲಾಯಿತು. ಸಮಿತಿಯ ಸದಸ್ಯರಾಗಿ ರಾಧಾಕೃಷ್ಣ, ರಘುಧರನ್, ಮಹೇಶ್, ಆಶಾ ರೈ, ಜೋಸಿ ಕುರ್ಯಾಕೋಸ್, ಸುಮ ಅವರನ್ನು ಆರಿಸಲಾಯಿತು. ಲೆಕ್ಕ ಪರಿಶೋಧಕರಾಗಿ ದೇವದಾಸ್ ಪಾರೆಕಟ್ಟೆ, ಪ್ರದೀಪ್ ಕುಮಾರ್ ಅವರನ್ನು ಆರಿಸಲಾಯಿತು. ಯು.ಪ್ರಶಾಂತ್ ಕುಮಾರ್ ಚುನಾವಣೆಯನ್ನು ನಿಯಂತ್ರಿಸಿದರು. ವಿದ್ಯಾಶಂಕರಿ ಟೀಚರ್ ಸ್ವಾಗತಿಸಿದರು. ರೂಪಕಲ ವಂದಿಸಿದರು.


