ಕಾಸರಗೋಡು: ಮಕ್ಕಳಿಗೆ ಭಾರತೀಯ ಆಧ್ಯಾತ್ಮಿಕ ಚಿಂತನೆ ಹಾಗು ಸನಾತನ ಧರ್ಮಗಳ ವಿವರಗಳನ್ನು ಎಳವೆಯಲ್ಲೇ ಭೋದಿಸಬೇಕು. ರಾಮಕೃಷ್ಣ ಪರಮಹಂಸರ ಶಿಷ್ಯರಾದ ಸ್ವಾಮಿ ವಿವೇಕಾನಂದ ಅವರ ಚಿಂತನೆಗಳು, ದೂರದರ್ಶಿತ್ವ ಹಾಗು ಬದುಕುಗಳನ್ನು ಮುಂದಿನ ತಲೆಮಾರು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಪ್ರಭಾಷಿಕ ಸಮಿತಿ ಕೇರಳ ಪ್ರಾಂತ್ಯಾಧ್ಯಕ್ಷರಾದ ಕೆ.ಎನ್.ರಾಧಾಕೃಷ್ಣ ಮಾಸ್ತರ್ ಕಣ್ಣೂರು ಹೇಳಿದರು.
ಅವರು ವಿವೇಕಾನಂದ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್‍ನ ಆಶ್ರಯದಲ್ಲಿ ಕರಂದಕ್ಕಾಡು ಶ್ರೀ ವೀರ ಹನುಮಾನ್ ಮಂದಿರದ ಪರಿಸರದಲ್ಲಿ ಏರ್ಪಡಿಸಿದ ವಿವೇಕಾನಂದ ಜಯಂತಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಸ್ವಾಮಿ ವಿವೇಕಾನಂದರು ಹಿಂದುತ್ವವನ್ನು ಜಗತ್ತಿಗೇ ಸಾರಿದ ಮಹಾನುಭಾವರು. ಶೈಶವಾವಸ್ಥೆಯಿಂದಲೇ ಮಕ್ಕಳು ಶಕ್ತಿಶಾಲಿಗಳಾಗುವಂತೆ ಮಾಡಿ ಅವರಿಗೆ ದುರ್ಬಲತೆಯನ್ನಾಗಲೀ, ಮೂಢ ಆಚರಣೆಗಳನ್ನಾಗಲೀ ಭೋದಿಸಬೇಡಿ. ಅವರನ್ನು ಶಕ್ತಿವಂತರನ್ನಾಗಿ ಮಾಡಿ ಎಂದಿದ್ದರು ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ರಾಜ್ಯ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಹಾಗು ನಟ ಕಾಸರಗೋಡು ಚಿನ್ನಾ ಅವರು ಈ ಜಗತ್ತಿನಲ್ಲಿ ಶಾಶ್ವತವಾದದ್ದು ಯಾವುದೂ ಇಲ್ಲ. ಒಂದಲ್ಲ ಒಂದು ದಿನ ನಮ್ಮ `ಶಾಶ್ವತ ಮನೆ' ಸೇರ ಬೇಕಾಗುತ್ತದೆ. ಸಮಾಜ ಸೇವೆ ಮುಖಾಂತರ ದೇಶ ಸೇವೆ ಮಾಡುತ್ತಿರುವ ವಿವೇಕಾನಂದ ಚಾರಿಟೇಬಲ್ ಟ್ರಸ್ಟ್ ಹಾಗು ವೀರ ಹನುಮಾನ್ ಮಂದಿರದ ಸೇವಕರನ್ನು ಅಭಿನಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಟ್ರಸ್ಟಿನ ಅಧ್ಯಕ್ಷ ಹಾಗು ಮಾಜಿ ನಗರಸಭಾ ಸದಸ್ಯ ಎನ್.ಸತೀಶ್ ಅವರು ಮಾತನಾಡಿ ಟ್ರಸ್ಟ್ ಸಮಾಜಕ್ಕೆ ಕೊಡಮಾಡಿದ `ಉಚಿತ ಶವಯಾತ್ರಾ ವಾಹನ'ಕ್ಕೆ ಸಹಕರಿಸಿದ ವೀರ ಹನುಮಾನ್ ಮಂದಿರದ ಸದಸ್ಯರಿಗೆ ಅಭಿನಂದಿಸಿದರು.
ಸಮಾರಂಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಗರ ಸಂಘ ಚಾಲಕ್ ಕೆ.ಟಿ.ಕಾಮತ್, ನಗರಸಭಾ ಸದಸ್ಯರಾದ ಪಿ.ರಮೇಶ್, ಧಾರ್ಮಿಕ ಮುಂದಾಳು ಕುಂಟಾರು ರವೀಶ ತಂತ್ರಿ, ವೀರ ಹನುಮಾನ್ ಮಂದಿರದ ಉಪಾಧ್ಯಕ್ಷರಾದ ಅನಂತರಾಜ ಮುಂತಾದವರು ಉಪಸ್ಥಿತರಿದ್ದರು.
ವಿವೇಕಾನಂದ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಹಾಗು ವೀರಹನುಮಾನ್ ಮಂದಿರದವರು ಕೊಡಮಾಡಿದ `ಶವ ಯಾತ್ರಾ' ವಾಹನವನ್ನು ಲೋಕಾರ್ಪಣೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್‍ನ ಉಪಾಧ್ಯಕ್ಷರಾದ ಸಮಾಜ ಸೇವಕ ಸಿ.ವಿ.ಪೆÇದುವಾಳ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬಾಲಗೋಕುಲದ ಮಕ್ಕಳು ವಂದೇ ಮಾತರಂ ಗೀತೆಯನ್ನು ಹಾಡಿದರು. ಟ್ರಸ್ಟ್ ಕಾರ್ಯದರ್ಶಿ ಕೆ.ಎನ್.ವೇಣುಗೋಪಾಲ ಸ್ವಾಗತಿಸಿದರು. ಕೋಶಾ„ಕಾರಿ ನಗರಸಭಾ ಸದಸ್ಯ ಕೆ.ರವೀಂದ್ರ ಪೂಜಾರಿ ವಂದಿಸಿದರು.



