HEALTH TIPS

ಕಾಸರಗೋಡು ಜಿಲ್ಲಾಧಿಕಾರಿಗೆ ರಾಷ್ಟ್ರೀಯ ಪ್ರಶಸ್ತಿ-ವೀ ಡಿಸರ್ವ್ ಯೋಜನೆಗೆ ದಕ್ಕಿದ ಗರಿಮೆ

     
        ಕಾಸರಗೋಡು:  2019-20ನೇ ವರ್ಷದ ಇ-ಗವರ್ನೆನ್ಸ್ ಗಿರುವ ರಾಷ್ಟ್ರೀಯ ಪ್ರಶಸ್ತಿಗೆ ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಆಯ್ಕೆಯಾಗಿದ್ದಾರೆ. ಕೇಂದ್ರ ಪರ್ಸನಲ್, ಪಬ್ಲಿಕ್ ಗ್ರೀವೆನ್ಸೆಸ್ ಆಂಡ್ ಪೆನ್ಶನ್ಸ್ ಮಂತ್ರಾಲಯ ಸಿಬ್ಬಂದಿ ಆಡಳಿತ ಪರಿಷ್ಕಾರ ಇಲಾಖೆ ಏರ್ಪಡಿಸಿರುವ ಪುರಸ್ಕಾರಕ್ಕೆ ಅವರು ಆಯ್ಕೆಗೊಂಡಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದಲ್ಲಿ ವಿಶೇಷಚೇತನರಿಗಾಗಿ ಜಾರಿಗೊಳಿಸಿರುವ "ವೀ ಡಿಸರ್ವ್" ಯೋಜನೆಗಾಗಿ ಈ ಪುರಸ್ಕಾರ ಸಂದಿದೆ. ಇ-ಗವರ್ನೆನ್ಸ್ ನಲ್ಲಿ ಜಿಲ್ಲಾ ಮಟ್ಟದಲ್ಲಿ ಸತ್ಯುತ್ತಮ ಚಟುವಟಿಕೆ ನಡೆಸಿದ ಯೋಜನೆಗಾಗಿ ಚಿನ್ನದ ಪದಕ ಇವರಿಗೆ ಲಭಿಸಲಿದೆ. ಫೆ.8ರಂದು ಮುಂಬಯಿಯಲ್ಲಿ ನಡೆಯುವ ಇ-ಗವರ್ನೆನ್ಸ್ ರಾಷ್ಟ್ರೀಯ ಸಮ್ಮೇಳನದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಲಿದೆ. ಕಾಸರಗೋಡು ಜಿಲ್ಲೆಗೆ ಈ ಮೂಲಕ ಪ್ರಥಮ ಬಾರಿಗೆ ಈ ಪುರಸ್ಕಾರ ಲಭಿಸುತ್ತಿದೆ. ಕಂದಾಯ ಸಚಿವ ಇ.ಚಂದ್ರಶೇಖರನ್ ಅವರು ಜಿಲ್ಲಾಧಿಕಾರಿ ಅವರನ್ನು ಅಭಿನಂದಿಸಿದರು.
         "ವೀ ಡಿಸರ್ವ್ ಯೋಜನೆಗೆ ಸಂದ ಪುರಸ್ಕಾರ:
     ಅರ್ಹ ವ್ಯಕ್ತಿಗೆ ಸೂಕ್ತ ಅವಧಿಯಲ್ಲಿ ಅಗತ್ಯವಿರುವ ಸಹಾಯ ಒದಗಿಸುವ ಉದ್ದೇಶದಿಂದ ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ರಚಿಸಿದ ಯೋಜನೆ "ವೀ ಡಿಸರ್ವ್". ಕೇಂದ್ರಸರಕಾರದ ಎ.ಡಿ.ಐ.ಪಿ. ಯೋಜನೆಯೊಂದಿಗೆ ಸಹಕರಿಸಿ ಈ ಯೋಜನೆ ಜಾರಿಗೊಳ್ಳುತ್ತಿದೆ. ಎ.ಡಿ.ಐ.ಪಿ. ಸ್ಕೀಂ ಪ್ರಕರ ಜಿಲ್ಲೆಯಲ್ಲಿನಡೆಸಿದ ಶಿಬಿರಗಳಲ್ಲಿ ಆಯ್ಕೆಗೊಂಡ ವಿಶೇಷಚೇತನರಿಗೆ ಕೇಂದ್ರ ಸರ್ಕಾರಿ ಸಂಸ್ಥೆ ಅಲೀಂಕೋ ದ ಸಹಕಾರದೊಮದಿಗೆ ಸಹಾಯ ಉಪಕರಣಗಳನ್ನು ವಿತರಿಸಲಾಗಿದೆ. ಯೋಜನೆ ಪ್ರಕಾರ ಈಗಾಗಲೇ 757 ಅತ್ಯಧುನಿಕ ಸಹಾಯಕ ಉಪಕರಣಗಳನ್ನು ವಿತರಿಸಲಾಗಿದೆ. ಜಿಲ್ಲಾ ಆಡಳಿತೆಗಾಗಿ ಕೇರಳ ಸಮಾಜಿಕ ಸುರಕ್ಷಾ ಮಿಷನ್ ಯೋಜನೆಯ ಏಕಸೂತ್ರತೆ ನಿರ್ವಹಿಸುತ್ತಿದೆ. ಯೋಜನೆಯ ಅಂಗವಾಗಿ ಸಿದ್ಧಪಡಿಸಲಾದ ವೆಬ್ ಸೈಟ್  ಗಾಲಿಕುರ್ಚಿ, ಎಂ.ಆರ್.ಕಿಟ್, ಬ್ರೈಲಿ ಕೈನ್, ಸ್ಮಾರ್ಟ್ ಫೆÇೀನ್ ಸಹಿತ ಸಹಾಯಕ ಉಪಕರಣಗಳನ್ನು, ವಿವಿಧ ರೀತಿಯ ಕ್ರಚಸ್ ಸಹಿತ ಉಪಕರಣಗಳನ್ನು ಈ ಯೋಜನೆಯ ಅಂಗವಾಗಿ ಈಗಾಗಲೇ ವಿತರಣೆ ನಡೆಸಲಾಗಿದೆ. ಯೋಜನೆಯ ಅಂಗವಾಗಿ ನಡೆದ ಶಿಬಿರಗಳಲ್ಲಿ 19578 ವಿಶೇಷಚೇತರು ಭಾಗವಹಿಸಿದಾರೆ.ಇವರಲ್ಲಿ 4886 ಮಂದಿಯ ಸಮಗ್ರ ವೈದ್ಯಕೀಯ ತಪಾಸಣೆ ನಡೆಸಲಾಗಿದೆ. 3745 ಮಂದಿಗೆ ವೈದ್ಯಕೀಯ ಮಂಡಳಿಯ ಅರ್ಹತಾಪತ್ರ ಲಭಿಸಿದೆ. 21 ಗ್ರಾಮಪಂಚಾಯತ್ ಗಳಲ್ಲಿ ಈ ಶಿಬಿರ ಯಶಸ್ವಿಯಾಗಿ ನಡೆದಿದ್ದು, ಮುಂದಿನಹಂತದಲ್ಲಿ ಎಲ್ಲ ವಿಸೇಷ ಚೇತನರಿಗೆ ಯು.ಡಿ.ಐ.ಡಿ. ಕಾರ್ಡ್ ಲಭಿಸಲಿದೆ. ಈ ಯೋಜನೆ ಜಾರಿ ಮೂಲಕ 2016ರ ರಾಷ್ಟ್ರೀಯ ವಿಶೇಷಚೇತನ ಕಾಯಿದೆ ಜಾರಿಗೊಳಿಸಿದ ದೇಶದ ನೊದಲ ಜಿಲ್ಲೆ ಎಂಬ ಹೆಗ್ಗಳಿಕೆ ಕಾಸರಗೋಡಿಗೆ ಲಭಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries