ಕಾಸರಗೋಡು: ನಗರದ ಪ್ರಖ್ಯಾತ ಅಣಂಗೂರು ಶ್ರೀ ಶಾರದಾಂಬಾ ಭಜನಾ ಮಂದಿರದ 20ನೇ ಪುನ:ಪ್ರತಿಷ್ಠಾ ವಾಷಿಕೋತ್ಸವವು ಜ.26ನೇ ರವಿವಾರದಂದು ವಿವಿ ವೈದಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಅಂದು ಬೆಳಗ್ಗೆ 8ಕ್ಕೆ ಗಣಪತಿಹೋಮ, 9ಕ್ಕೆ ನಾಗತಂಬಿಲ ಸೇವೆ, ಮಧ್ಯಾಹ್ನ 12ಕ್ಕೆ ಶ್ರೀ ಸತ್ಯನಾರಾಯಣ ಪೂಜೆ, 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, 1 ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 8ಕ್ಕೆ ಶ್ರೀ ಶಾರದಾಂಬಾ ಮಾತೃ ಸಮಿತಿ ಶಾರದಾನಗರ ಅಣಂಗೂರು ಅವರಿಂದ ಭಜನಾ ಸಂಕೀರ್ತನಾ ಸೇವೆ, 9.30ಕ್ಕೆ ಮಹಾಪೂಜೆ ಮತ್ತು ಪ್ರಸಾದ ವಿತರಣೆ ಜರಗಲಿದೆ.
ಮಂದಿರದ ವಾರ್ಷಿಕೋತ್ಸವದ ಅಂಗವಾಗಿ ವರ್ಷಂಪ್ರತಿಯಂತೆ ಗುಳಿಗನ ಕೋಲವು ಫೆ.2 ರಂದು ರವಿವಾರ ಬೆಳಗ್ಗೆ 11ಕ್ಕೆ ಜರಗಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾಯಕ್ರಮವನ್ನು ಯಶಸ್ವೀಗೊಳಿಸಬೇಕಾಗಿ ಮಂದಿರ ಪ್ರಕಟಣೆಯಲ್ಲಿ ಕೋರಲಾಗಿದೆ.

