ಕಾಸರಗೋಡು: ನಗರದ ಕಾಸರಗೋಡು ಟೌನ್ ಜಿ.ಯು.ಪಿ.ಎಸ್.ನಲ್ಲಿ ವಿದ್ಯಾರ್ಥಿಗಳಿಗೆ ಎಲ್.ಎಸ್. ಎಸ್. ಮತ್ತು ಯು.ಎಸ್.ಎಸ್. ಪರೀಕ್ಷೆಯ ತರಬೇತಿ ಮತ್ತು ಮಾದರಿ ಪರೀಕ್ಷೆ ನಡೆಯಿತು.
ಕಾರ್ಯಕ್ರಮದಲ್ಲಿ ಕಿರಣಪ್ರಸಾದ್ ಕೂಡ್ಲು, ಭ್ರಮರಾಂಬಿಕ ಕೂಡ್ಲು, ದಿವ್ಯಾ ಮೊಗ್ರಾಲ್ ಪುತ್ತೂರು ವಿದ್ಯಾಲಕ್ಷ್ಮೀ ಕಂಬಾರು, ದೇವಕಿ ದೇವಿ ಮಧೂರು, ವಿಜಯಕುಮಾರಿ ನುಳ್ಳಿಪ್ಪಾಡಿ, ಬಾಬು ಬಂದಡ್ಕ, ಪ್ರದೀಪ ಬೋವಿಕಾನ, ಸುರೇಖ ಕಾಸರಗೋಡು, ಅನೀಶ್ ಮಾಣಿಮೂಲೆ, ಗಂಗಾ ಕುಮಾರಿ, ಸಂಧ್ಯಾ, ವಿನೋದ್ ರಾಜ್, ಹರಿಕೃಷ್ಣ ಕಲ್ಲಕಟ್ಟ, ಬಿಂದು ಉದುಮ ತರಬೇತಿ ನೀಡಿದರು.
ತರಬೇತಿ ಕಾರ್ಯಕ್ರಮದಲ್ಲಿ 75ಎಲ್.ಎಸ್.ಎಸ್. ಹಾಗು 41 ಯು.ಎಸ್.ಎಸ್. ಪರೀಕ್ಷಾರ್ಥಿಗಳು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಎಲ್ಲ ಮುಖ್ಯೋಪಾಧ್ಯಾಯರು ಹಾಗೂ ಸಹಾಯಕ ಅಧ್ಯಾಪಕರು, ಹೆತ್ತವರು, ಟೌನ್ ಜಿಯುಪಿ ಶಾಲೆಯ ಲೀಲ ಟೀಚರ್ ಮತ್ತು ಸಿಬ್ಬಂದಿ ವರ್ಗ, ಜಿಲ್ಲಾ ವಿದ್ಯಾ„ಕಾರಿ ನಂದಿಕೇಶ್ ಸಹಕರಿಸಿದರು. ಕೇರಳ ಪ್ರಾಂತ್ಯ ಕನ್ನಡ ಅಧ್ಯಾಪಕ ಸಂಘ ಕಾಸರಗೋಡು ಘಟಕ ಅಭಿನಂದಿಸಿದೆ.


