ಮಂಜೇಶ್ವರ: ಲೈಫ್ ಮಿಷನ್ ಫಲಾನುಭವಿಗಳು ಕೃಷಿ ಮೂಲಕ ಜೀವನ ನಡೆಸಬಹುದಾದ ನಿಟ್ಟಿನಲ್ಲಿ ಕೃಷಿ ಇಲಾಖೆ ಅನುಷ್ಠಾನಗೊಳಿಸುವ "ಜೀವನಿ" ಯೋಜನೆ ಮಂಜೇಶ್ವರ ಬ್ಲಾಕ್ ಪಂಚಾಯತಿ ಮಟ್ಟದಲ್ಲಿ ಆರಂಭಗೊಂಡಿದೆ.
ಸೋಮವಾರ ಮಂಜೇಶ್ವರ ಕಲಾಸ್ಪರ್ಶ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಎಂ.ಸಿ.ಕಮರುದ್ದೀನ್ ಯೋಜನೆ ಉದ್ಘಾಟಿಸಿದರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಅವರು ಶಾಸಕರಿಗೆ ಸಸಿಗಳ ಕಿಟ್ ಹಸ್ತಾಂತರಿಸಿದರು. ಪುಟ್ಟ ಜಾಗದಲ್ಲೂ ಕೃಷಿ ನಡೆಸಬಹುದಾದ ವಿಧಾನವನ್ನು ಜೀವನಿ ಯೋಜನೆ ಮೂಲಕ ತಿಳಿಸಲಾಗುತ್ತದೆ.

