HEALTH TIPS

ಪೆರ್ಲ ನಾಲಂದ ಕಾಲೇಜಿನಲ್ಲಿ ಗಣರಾಜ್ಯೋತ್ಸವ ದಿನಾಚರಣೆ

      ಪೆರ್ಲ: ಪೆರ್ಲ ನಾಲಂದ ಕಾಲೇಜು ಘಟಕದ ನೇತೃತ್ವದಲ್ಲಿ ಭಾನುವಾರ ಗಣರಾಜ್ಯೋತ್ಸವ ದಿನವನ್ನು ಆಚರಿಸಲಾಯಿತು.
         ಕಾಲೇಜು ಆಡಳಿತ ಮಂಡಳಿಯ ಕಾರ್ಯದರ್ಶಿ ಜಯಗೋವಿಂದ ಉಕ್ಕಿನಡ್ಕ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಭಾರತದ ಸಂವಿಧಾನ ಅತ್ಯಂತ ಉತ್ಕøಷ್ಟವಾಗಿದ್ದು, ಹೆಚ್ಚು ಬಾರಿ ತಿದ್ದುಪಡಿ ಮಾಡಬೇಕಾದ ಅವಶ್ಯಕತೆ ಬಂದಿಲ್ಲ. ಅಲ್ಪ ಸಮಯದಲ್ಲಿ ಅಚ್ಚುಕಟ್ಟಾಗಿ  ಭಾರತದ ಸಂವಿಧಾನವನ್ನು ರಚಿಸಲು ನೇತೃತ್ವ ವಹಿಸಿದ್ದ ಬಿ. ಆರ್ ಅಂಬೇಡ್ಕರ್ ಅವರ ಪರಿಶ್ರಮ ಚಿರಸ್ಮರಣೀಯ ಎಂದರು.
     ಕಾಲೇಜು ಪ್ರಾಂಶುಪಾಲ ಡಾ. ವಿಘ್ನೇಶ್ವರ ವರ್ಮುಡಿ ಮಾತನಾಡಿ, ಕಾಲಚಕ್ರ ಮುಂದೆ ಸಾಗುತ್ತಿದ್ದಂತೆ ಬದಲಾಗುತ್ತಿರುವ ಪರಿಸ್ಥಿತಿಗೆ ಹೊಂದಿಕೊಳ್ಳುವ ನಿಟ್ಟಿನಲ್ಲಿ ಅನಿವಾರ್ಯವಾಗಿ ಸಂವಿಧಾನ ತಿದ್ದುಪಡಿ ಮಾಡಬೇಕಾಗಿ ಬರುತ್ತದೆ. ಸಂವಿಧಾನ ತಿದ್ದುಪಡಿಗಳ ವಿರುದ್ಧಗಳ ವಿರುದ್ಧ ಶಾಂತಿಯುತ ಹೋರಾಟಗಳು ನಡೆಸುವ ಹಕ್ಕು ಭಾರತೀಯರಿಗಿದೆ. ಆದರೆ ಆ  ಪ್ರತಿಭಟನೆಗಳು ರಾಷ್ಟ್ರದಲ್ಲಿ ಅಶಾಂತಿ ಬೀಜವನ್ನು ಬಿತ್ತಬಾರದು, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಾಶವನ್ನುಂಟು ಮಾಡಬಾರದು ಎಂದರು.
     ಕಾಲೇಜಿನ ನೌಕರ ಸಂಘದ ಕಾರ್ಯದರ್ಶಿ, ಕನ್ನಡ ಉಪನ್ಯಾಸಕ ಕೇಶವ ಶರ್ಮ ಶುಭ ಹಾರೈಸಿದರು. ದಿನಾಚರಣೆಯ ಅಂಗವಾಗಿ ಕಾಲೇಜು ಪರಿಸರ ಶುಚೀಕರಣ ಕಾರ್ಯ ಹಮ್ಮಿಕೊಳ್ಳಲಾಯಿತು. ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ. ಎಂ.,ಸ್ಟೆಟಿಸ್ಟಿಕ್ಸ್ ವಿಭಾಗದ ಉಪನ್ಯಾಸಕಿ ಸುಮ ವಿ. ಎಸ್, ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಗೀತಾ ವಿ. ಭಟ್, ಕಾಮರ್ಸ್ ಹಾಗೂ ಮ್ಯಾನೇಜ್ಮೆಂಟ್ ವಿಭಾಗದ ಉಪನ್ಯಾಸಕ ಅಜಿತ್ ಎಸ್., ಎನ್ನೆಸ್ಸೆಸ್ ಕಾರ್ಯದರ್ಶಿಗಳಾದ ಜಗತ್, ಕಾವ್ಯ, ಅಂಜನಾ, ಅಜಿತ್ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries