ಉಪ್ಪಳ: ಕೊಂಡೆವೂರಿನ ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್ ಚಾರಿಟೇಬಲ್ ಟ್ರಸ್ಟ್ ಅಧೀನ ಸಂಸ್ಥೆ ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದಲ್ಲಿ ಶಿಶುವಾಟಿಕಾ ವಿಭಾಗದ ಶಿಶುಸಂಗಮ 2019-2020 ಕಾರ್ಯಕ್ರಮ ಶನಿವಾರ ಸಂಭ್ರಮೋಲ್ಲಾಸಗಳೊಂದಿಗೆ ನಡೆಯಿತು.
ಶಾಲಾ ಆಡಳಿತ ಸಮಿತಿಯ ಅಧ್ಯಕ್ಷ ರಾಮಚಂದ್ರ ಚೆರುಗೋಳಿ ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಅರುಣ ಹಾಗೂ ಉದಯ ತರಗತಿಯ ಪುಟಾಣಿಗಳು ನೃತ್ಯ, ಹಾಡು, ಕತೆ, ಯೋಗಪ್ರದರ್ಶನ ಇತ್ಯಾದಿಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಿಶುವಾಟಿಕಾ ಮಾತೃಸಮಿತಿಯ ಅಧ್ಯಕ್ಷೆ ಲೀಲಾವತಿ ವಹಿಸಿದ್ದರು. ಅತಿಥಿಗಳಾಗಿ ಉಪಸ್ಥಿತರಿದ್ದ ಭಾರತೀಯ ವಿದ್ಯಾನಿಕೇತನ ಕೇರಳ ಘಟಕದ ಪೂರ್ಣಾವಧಿ ಕಾರ್ಯಕರ್ತ ಹರಿಹರನ್ ಅವರು ಭಾರತೀಯ ಮೌಲ್ಯಗಳಿಂದೊಡಗೂಡಿದ ಶಿಕ್ಷಣದ ಅವಶ್ಯಕತೆಯನ್ನು ತಿಳಿಯಪಡಿಸಿದರು. ಶಾಲಾ ಶಿಕ್ಷಕಿಯರಾದ ತಾರಾಲತಾ ಸ್ವಾಗತಿಸಿ, ಸ್ವಾತಿ ನಿರೂಪಿಸಿದರು. ಅಧ್ಯಾಪಕ ಸುಬ್ರಹ್ಮಣ್ಯ ಭಟ್ ವಂದಿಸಿದರು.


