ಪೆರ್ಲ: ಕಾಮದುಘಾ ಯೋಜನೆಯನ್ವಯ ಕಾರ್ಯಾಚರಿಸುತ್ತಿರುವ ಬಜಕ್ಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ ಸ್ವಚ್ಛ ಭಾರತ ಪರಿಕಲ್ಪನೆಯಲ್ಲಿ ದೇಶೀ ಗೋವಿನ ಗೋಮಯದಿಂದ ಹಣತೆ ತಯಾರಿ ಕಾರ್ಯಾಗಾರ ಸೋಮವಾರ ಆರಂಭಗೊಂಡಿತು.
ಚೆನ್ನೈಯ ಉದ್ಯಮಿ ಶ್ರೀನಾಥ್, ವಿಜಯರಾಘವನ್ ಮತ್ತು ತಂಡದವರು ಗೋಶಾಲೆಯ ಹಣತೆ ತಯಾರಿಯ ಹೂಡಿಕೆ ಹಾಗೂ ಮಾರುಕಟ್ಟೆಗೆ ಸಿದ್ಧತೆ ಮಾಡಿರುತ್ತಾರೆ. ಜ.25 ರಂದು ಪೆರಾಜೆ ಮಾಣಿ ಮಠದಲ್ಲಿ ಶ್ರೀರಾಘವೇಶ್ವರ ಶ್ರೀಗಳನ್ನು ಗೋಶಾಲೆಯ ತಂಡದೊಂದಿಗೆ ಭೇಟಿ ಮಾಡಿ ಮೊದಲ ಹಂತದ ಮೊತ್ತವನ್ನು ಶ್ರೀ ಗುರುಗಳಿಗೆ ಸಮರ್ಪಿಸಿ ಅನುಗ್ರಹ ಪಡೆದುಕೊಂಡರು. ಗೋಶಾಲೆಯ ಸಂಚಾಲಕ ಜಗದೀಶ್ ಗೋಳಿತ್ತಡ್ಕ ಸಂದರ್ಭದಲ್ಲಿ ಉಪಸ್ಥಿತರಿದ್ದರು.


