ಮುಳ್ಳೇರಿಯ: ಬೆಳ್ಳೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶುಕ್ರವಾರ ಬೆಳ್ಳೂರು ಪಂಚಾಯಿತಿ ಮಟ್ಟದ ಎಲ್ ಎಸ್ ಎಸ್ ತರಬೇತಿ ನಡೆಯಿತು.
ಶಾಲಾ ಮುಖ್ಯ ಶಿಕ್ಷಕಿ ವಾರಿಜಾ ನೇರೋಳು ತರಬೇತಿ ಉದ್ಘಾಟಿಸಿದರು. ಹಿರಿಯ ಶಿಕ್ಷಕ ಕುಂಞರಾಮ ಮಣಿಯಾಣಿ ಅಧ್ಯಕ್ಷತೆ ವಹಿಸಿದರು. ಶಿಕ್ಷಕ ಸಂಘ ಕಾರ್ಯದರ್ಶಿ ಮೋಹನನ್ ಶುಭ ಹಾರೈಸಿದರು. ಶಿಕ್ಷಕರಾದ ಪ್ರವೀಣ್, ನವೀನ ಕುಮಾರ್ ಉಪಸ್ಥಿತರಿದ್ದರು. ಪಂಚಾಯತಿ ವಿದ್ಯಾಭ್ಯಾಸ ಸಮಿತಿ ಕಾರ್ಯದರ್ಶಿ ಪ್ರಕಾಶ್ ಸ್ವಾಗತಿಸಿ, ಶಿಕ್ಷಕ ದಾಸಪ್ಪ ವಂದಿಸಿದರು.


