HEALTH TIPS

ಪೌರತ್ವ ಕಾಯ್ದೆಗೆ ವಿರೋಧ ಸಂವಿಧಾನ ವಿರೋಧಿ ಚಟುವಟಿಕೆ- ಬಿಜೆಪಿ

       ಮಂಜೇಶ್ವರ: ಲೋಕಸಭೆ, ರಾಜ್ಯಸಭೆಯಲ್ಲಿ ಬಹುಮತದಿಂದ ಅನುಮೋದನೆಗೊಂಡ ಬಳಿಕ ರಾಷ್ಟ್ರಪತಿಗಳಿಂದ ಅಂಗೀಕಾರಗೊಂಡಿರುವ ಕಾನೂನಿಗೆ ವಿರುದ್ಧವಾಗಿ ಬಿಜೆಪಿ ವಿರೋಧಿಗಳು ಮಾಡುತ್ತಿರುವ ಪ್ರತಿಭಟನೆಗಳು ಸಂವಿಧಾನ ವಿರೋಧಿ ಚಟುವಟಿಕೆ ಎಂದು ಬಿಜೆಪಿ ಮಂಜೇಶ್ವರ ಪಂಚಾಯತಿ ಸಮಿತಿ ತಿಳಿಸಿದೆ.
       ಮುಸ್ಲಿಂ ಲೀಗ್ ಅಡಳಿತವಿರುವ ಮಂಜೇಶ್ವರ ಗ್ರಾಮ ಪಂಚಾಯತಿಯಲ್ಲಿ ಆಡಳಿತ ಸಭೆಯಲ್ಲಿ ಪೌರತ್ವ ಕಾಯ್ದೆಯ ವಿರುದ್ಧ ಠರಾವು ಮಂಡಿಸಲು ಮುಸ್ಲಿಂ ಲೀಗ್ ಪ್ರಯತ್ನ ಮಾಡುತ್ತಿರುವುದು ಹಾಸ್ಯಾಸ್ಪದ. ಲೋಕಸಭೆ, ರಾಜ್ಯಸಭೆಯಲ್ಲಿ ಅಂಗೀಕೃತವಾದ ಕಾನೂನಿಗೆ ಗ್ರಾಮ ಪಂಚಾಯತಿ ಸಭೆಯಲ್ಲಿ ಠರಾವು ಮಂಡಸಿ ವಿರೋಧ ಮಾಡುವುದು ಯಾವ ನಿಯಮದ ಪ್ರಕಾರ ಎಂದು ಬಿಜೆಪಿ ಪ್ರಶ್ನಿಸಿದೆ?
      ಮುಸ್ಲಿಂ ಸಮುದಾಯದ ಮಧ್ಯೆ ತಪ್ಪು ಮಾಹಿತಿಯನ್ನು ನೀಡಿ, ಪ್ರೇರೇಪಿಸಿ ವೋಟ್ ಬ್ಯಾಂಕ್ ಭದ್ರಪಡಿಸಲು ಎಡರಂಗ ಹಾಗೂ ಐಕ್ಯರಂಗ ಹೂಡಿರುವ ಸಂಚು ಇದು. ಇದಕಾಗಿ ಮತೀಯ ಮೂಲಭೂತವಾದಿಗಳ ಸಹಕಾರ ಪಡೆಯುತ್ತಿರುವುದು ರಾಷ್ಟ್ರೀಯ ಭದ್ರತೆಗೆ ಸವಾಲಾಗಿದೆ. ದೇಶದ ಜನತೆಯಲ್ಲಿ ರಾಷ್ಟ್ರಪ್ರೇಮ ಮೂಡಿಸುವಲ್ಲಿ ಈ ಕಾಯ್ದೆ ಯಶಸ್ವಿಯಾಗಿದೆ. ಶರಿಯತ್ ಕಾನೂನು, ಕಮ್ಯುನಿಸ್ಟ್ ಕಾನೂನಿನ ಬಗ್ಗೆ ಮಾತನಾಡುವರೆಲ್ಲ ಈಗ ರಾಷ್ಟ್ರಧ್ವಜ ಹಿಡಿದು ರಾಷ್ಟ್ರಗೀತೆ ಹಾಡುವವಲ್ಲಿ ಈ ಕಾಯ್ದೆ ಯಶಸ್ವಿಯಾಗಿದೆ. ಇದು ಅಚ್ಛೇದಿನ್ ಸೂಚನೆ ಎಂದು ಬಿಜೆಪಿ ಅಭಿಪ್ರಾಯಪಟ್ಟಿದೆ.
      ಮಂಜೇಶ್ವರ ಗ್ರಾಮ ಪಂಚಾಯತಿಯಲ್ಲಿ ಮುಸ್ಲಿಂ ಲೀಗ್ ಮಂಡಿಸಲು ಉದ್ದೇಶಿಸಿರುವ ಠರಾವು ಮಂಡನೆಗೆ ಅವಕಾಶ ನೀಡಬಾರದು. ನೀಡಿದರೆ ಪಂಚಾಯತಿ ಕಾರ್ಯದರ್ಶಿಗಳು ಸಂವಿಧಾನ ವಿರೋಧಿಯಾಗಿ ಕಾರ್ಯನಿರ್ವಹಿಸಿದಂತೆ ಎಂದು ಬಿಜೆಪಿ ತಿಳಿಸಿದೆ.
      ಗ್ರಾಮ ಪಂಚಾಯತಿ ಜನಪ್ರತಿನಿಧಿಗಳು ಸಹಿ ಹಾಕಿ ಪೌರತ್ವ ಕಾಯ್ದೆ ವಿರುದ್ಧ ಠರಾವು ಮಂಡಿಸಬಾರದೆಂದು ಗ್ರಾ.ಪಂ.ಕಾರ್ಯದರ್ಶಿಗೆ ಬಿಜೆಪಿ ಸದಸ್ಯರು ಮನವಿ ನೀಡಿರುವರು. ಬಿಜೆಪಿ ಪಂಚಾಯತಿ ಜನಪ್ರತಿನಿಧಿಗಳು, ಮುಖಂಡರುಗಳಾದ ಹರಿಶ್ಚಂದ್ರ ಎಂ, ಯಾದವ ಬಡಾಜೆ, ಪದ್ಮನಾಭ ಕಡಪರ, ಆದರ್ಶ್ ಬಿಎಂ, ತಾರಾನಾಥ್ ಹೊಸಂಗಡಿ, ಭಗವಾನ್ ದಾಸ್ ಮೊದಲಾದವರು ಗ್ರಾ.ಪಂ. ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries