ಕಾಸರಗೋಡು: ವಸತಿ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಕೇರಳ ಇತರ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ಅಭಿಪ್ರಾಯಪಟ್ಟರು.
ಕಾಞಂಗಾಡ್ ಪುರಭವನದಲ್ಲಿ ಸೋಮವಾರ ಜರುಗಿದ ಕಾಞಂಗಾಡ್ ನಗರಸಭೆಯ ಲೈಫ್ ಮಿಷನ್ ಕುಟುಂಬ ಸಂಗಮ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಅರ್ಧ ಶತಮಾನದಿಂದ ವಿವಿಧ ವಸತಿ ಯೋಜನೆಗಳ ಮೂಲಕ ಅನೇಕ ಮಂದಿಗೆ ಮನೆ ಒದಗಿಸಲಾಗಿದೆ. 73,74 ಸಂವಿಧಾನದ ತಿದ್ದುಪಡಿ ಮೂಲಕ ಸ್ಥಲೀಯಾಡಳಿತ ಸಂಸ್ಥೆಗಳು ಇನ್ನಷ್ಟು ಪ್ರಬಲಗೊಂಡಿವೆ. ಈ ಮೂಲಕ ಅನೇಕ ವಸತಿ ರಹಿತರ ಪತ್ತೆ ಯಾಗಿದ್ದು, ಮನೆ ನಿರ್ಮಿಸಲಾಗಿದೆ. ಈ ಬಾರಿಯ ರಾಜ್ಯ ಸರಕಾರ ಅಧಿಕಾರಕ್ಕೇರಿದ ಮೇಳೆ ಮೊದಲ ಹಂತದಲ್ಲಿ 55 ಸಾವಿರ ಮಂದಿಯ ನಿರ್ಮಾಣ ಅರ್ಧದಲ್ಲೇ ಉಳಿದ ಮನೆಗಳನ್ನು ಪೂರ್ಣಗೊಳಿಸಲಾಗಿದೆ. ಎರಡನೇ ಹಂತದಲ್ಲಿ ಜಾಗವಿದ್ದು, ಮನೆಯಿಲ್ಲದವರಿಗೆ ವಸತಿ ನಿರ್ಮಿಸಿ ನೀಡಲು ನೇತೃತ್ವ ವಹಿಸಿಲಾಗಿದೆ. ಮೂರನೇ ಹಂತದಲ್ಲಿ ಜಾಗವೂ, ಮನೆಯೂ ಇಲ್ಲದವರಿಗೆ ವಸತಿ ನಿರ್ಮಾಣ ಮಾಡಲಾಗುವುದು ಎಂದವರು ಹೇಳಿದರು.
ರಾಜ್ಯದಲ್ಲಿ ಒಟ್ಟು 2 ಲಕ್ಷ ಮನೆಗಳ ನಿರ್ಮಾಣನಡೆಸಲಾಗಿರುವ ಬಗ್ಗೆ ಜ.26ರಂದು ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಘೋಷಣೆ ನಡೆಸುವರು. ಕಾಞಂಗಾಡ್ ನಗರಸಭೆಯಲ್ಲಿ ಮನೆ ಮಂಜೂರು ಗೊಂಡವರಲ್ಲಿ 175 ಮಂದಿಯ ಜಾಗ ನೀರಿನ ತಟದಲ್ಲಿ ಎಂದು ಡಾಟಾ ಬ್ಯಾಂಕ್ ನಲ್ಲಿ ತಪ್ಪಾಗಿ ನಮೂದನೆಗೊಂಡಿರುವುದು ನಿರ್ಮಾಣ ಚಟುವಟಿಕೆಗಳಿಗೆ ತಡೆಯಾಗಿದೆ. ಈ ಬಗ್ಗೆ ಸರಕಾರದಲ್ಲಿ ಗಂಭೀರ ಸಮಾಲೋಚನೆ ನಡೆಸುವುದಾಗಿ ಸಚಿವ ತಿಳಿಸಿದರು.
ಕಾಞಂಗಾಡ್ ನಗರಸಭೆ ಅಧ್ಯಕ್ಷ ವಿ.ವಿ.ರಮೇಶನ್ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯೀ ಸಮಿತಿ ಅಧ್ಯಕ್ಷರಾದ ಉಣ್ಣಿಕೃಷ್ಣನ್, ಎಂ.ಪಿ.ಜಾಫರ್, ಮಹಮ್ಮದ್ ಮುರಿಯಾನಾವಿ, ಭಾಗೀರಥಿ, ಸದಸ್ಯರಾದ ಎಚ್.ಎಂ.ರಂಷೀದ್, ಕೆ.ಮಹಮ್ಮದ್ ಕುಂಞ್ಞ, ಸಿಕೆ.ವತ್ಸಲನ್, ಎಂ.ಎಂ.ನಾರಾಯಣನ್, ಲೈಫ್ ಮಿಷನ್ ಜಿಲ್ಲಾ ಸಂಚಾಲಕ ಎಂ.ವತ್ಸಲನ್, ನಗರಸಭೆ ಪ್ರಭಾರ ಅಧಿಕಾರಿ ಬೆವಿನ್ ಜಾನ್ ವರ್ಗೀಸ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಸರಕಾರಗ ವಿವಿಧ ಇಲಾಖೆಗಳ ಸಹಾಯ ಒದಗಿಸುವ ಸ್ಟಾಲ್ ಗಳು ಇದ್ದುವು. ನಂತರ ವಿವಿಧ ಕಲಾಕಾರ್ಯಕ್ರಮಗಳು ಜರುಗಿದುವು. ನಗರಸಭೆ ಕಾರ್ಯದರ್ಶಿ ಎಂ.ಕೆ.ಗಿರೀಶ್ ವರದಿ ವಾಚಿಸಿದರು.
565 ಮನೆಗಳ ನಿರ್ಮಾಣ:
ಕಾಞಂಗಾಡ್ ನಗರಸಭೆಯ ಲೈಫ್ ಮಿಷನ್ ಯೋಜನೆ ಮೂಲಕ 565 ಮನೆಗಳ ನಿರ್ಮಾಣ ಪೂರ್ತಿಗೊಂಡಿದೆ. 351 ಮನೆಗಳ ನಿರ್ಮಾಣ ನಡೆಯುತ್ತಿದೆ.

