HEALTH TIPS

ಕಟೀಲು ಬ್ರಹ್ಮಕಲಶೋತ್ಸವ-ಕೊಂಡೆವೂರಲ್ಲಿ ಅಂತಿಮ ಹಂತದ ಸಭೆ


         ಉಪ್ಪಳ: ಕಟೀಲು ಶ್ರೀದುರ್ಗಾಪರಮೇಶ್ವರಿ ಕ್ಷೇತ್ರದಲಲಿ ಜ.22 ರಿಂದ ಫೆ.3ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ, ಶ್ವರ್ಣ ಧ್ವಜಸ್ತಂಭ ಪ್ರತಿಷ್ಠೆ, ನಾಗಮಂಡಲ, ಸಹಸ್ರ ಚಂಡಿಕಾ ಯಾಗದ ಕಾಸರಗೋಡು ಜಿಲ್ಲಾ ಸಮಿತಿಯ ಪೂರ್ವಭಾವೀ ಸಭೆ ಸೋಮವಾರ ಸಂಜೆ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಸಭಾ ಭವನದಲ್ಲಿ ನಡೆಯಿತು.
       ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಜ.256 ರಂದು ಜಿಲ್ಲಾ ಮಟ್ಟದಲ್ಲಿ ಉಪ್ಪಳದಿಂದ ತೆರಳಲಿರುವ ಹೊರೆಕಾಣಿಕೆ ಮೆರವಣಿಗೆಯ ಬಗ್ಗೆ ವಿಸ್ಕøತ ಅವಲೋಕನ ನಡೆಸಲಾಯಿತು. ಅಂದು ಅಪರಾಹ್ನ 3 ಕ್ಕೆ ಉಪ್ಪಳ ಪೇಟೆಯಿಂದ ಹೊರೆಕಾಣಿಕೆ ಮೆರವಣಿಗೆ ವೈಭವೋಪೇತವಾಗಿ ಶ್ರೀಕ್ಷೇತ್ರ ಕಟೀಲಿಗೆ ತೆರಳುವ ಬಗ್ಗೆ ಮಾಹಿತಿ ನೀಡಲಾಯಿತು. ವಿವಿಧ ವಲಯ ಸಮಿತಿಗಳ ಮೂಲಕ ಗರಿಷ್ಠ ಪ್ರಮಾಣದ ಸುವಸ್ತುಗಳನ್ನು ಹೊರೆಕಾಣಿಕೆಯಲ್ಲಿ ಅಳವಡಿಸಲು ತೀರ್ಮಾನಿಸಲಾಯಿತು. ಜೊತೆಗೆ ನಾಗಮಂಡಲ ಸೇವೆಗೆ ಅಗತ್ಯವಿರುವ ಅಡಿಕೆ ಹಿಂಗಾರವನ್ನು ಜ.31 ರಂದು ಶ್ರೀಕ್ಷೇತ್ರ ಕೊಂಡೆವೂರಿಗೆ ತಲಪಿಸುವ ನಿಟ್ಟಿನಲ್ಲಿ ನಿರ್ದೇಶಿಸಲಾಯಿತು.
       ಸಭೆಯಲ್ಲಿ ಬ್ರಹ್ಮಕಲಶೋತ್ಸವದ ಕಾಸರಗೋಡು ಜಿಲ್ಲಾ ಘಟಕದ ಗೌರವಾಧ್ಯಕ್ಷ ನಾರಾಯಣ ಹೆಗ್ಡೆ ಕೋಡಿಲೈಲು, ಕಾರ್ಯಾಧ್ಯಕ್ಷ ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು, ಗೌರವ ಕಾರ್ಯದರ್ಶಿ ಶ್ರೀಧರ ಶೆಟ್ಟಿ ಮುಟ್ಟಂ, ಪಿ.ಆರ್.ಶೆಟ್ಟಿ ಪೊಯ್ಯೆಲು, ಕಾರ್ಯಾಧ್ಯಕ್ಷೆ ಚೇತನಾ ಎಂ ಮೊದಲಾದವರು ಉಪಸ್ಥಿತರಿದ್ದರು. ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು ಸ್ವಾಗತಿಸಿ, ಮೀರಾ ಟೀಚರ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries