ಮಂಜೇಶ್ವರ: ನೆಹರೂ ಯುವ ಕೇಂದ್ರ ಕಾಸರಗೋಡು ಹಾಗೂ ಜೈ ಹನುಮಾನ್ ಫ್ರೆಂಡ್ಸ್ ಕ್ಲಬ್ ಚಿಗುರುಪಾದೆ ಇದರ ಆಶ್ರಯದಲ್ಲಿ ಒಂದು ದಿನದ ಸಮಾಜ ಸೇವೆ ಎಂಬ ವಿಷಯದ ಬಗ್ಗೆ ತರಬೇತಿ ಶಿಬಿರ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮವನ್ನು ಚಿಗುರುಪಾದೆ ಫ್ರೆಂಡ್ಸ್ ಕ್ಲಬ್ಬಿನ ಪರಿಸರದಲ್ಲಿ ಮೀಂಜ ಪಂಚಾಯತಿ ಅಧ್ಯಕ್ಷೆ ಶಂಶಾದ್ ಶುಕೂರ್ ಉದ್ಘಾಟಿಸಿದರು. ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತಿ ಸದಸ್ಯ ಚಂದ್ರಶೇಖರ ಕೋಡಿ ಉಪಸ್ಥಿತರಿದ್ದರು. ತರಬೇತಿಯನ್ನು ಟಿ.ಡಿ ಸದಾಶಿವ ರಾವ್ ನೀಡಿದರು. ಸಮಾರಂಭದಲ್ಲಿ ವಿಜಯಲಕ್ಷ್ಮಿ ಟಿ.ಆರ್, ರಾಜೇಶ್ವರಿ ಟೀಚರ್, ಯುವ ಕೇಂದ್ರದ ಸಂಯೋಜಕ ದೀಕ್ಷಿತ, ವಿನುತ್ ರಾಜ್, ಶಂಕರ ಸಿ ಹಾಗೂ ಶಂಕರ ಆಳ್ವ ಉಪಸ್ಥಿತರಿದ್ದರು.


