ಬದಿಯಡ್ಕ: ಸ್ವಯಂ ಸೇವಕರ ನಿಸ್ವಾರ್ಥ ಸೇವೆಯು ಒಂದು ಕಾರ್ಯಕ್ರಮವನ್ನು ಯಶಸ್ವಿಯತ್ತ ಕೊಂಡೊಯ್ಯುತ್ತದೆ. ಈ ನಿಟ್ಟಿನಲ್ಲಿ ಗೋಸಾಡ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಬ್ರಹ್ಮಕಲಶ ಮಹೋತ್ಸವದಲ್ಲಿ ಸ್ವಯಂಸೇವಕರು ಪ್ರಧಾನ ಪಾತ್ರ ನಿರ್ವಹಿಸಬೇಕಾಗಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಎಂ. ಸಂಜೀವ ಶೆಟ್ಟಿ ಹೇಳಿದರು.
ಕುಂಬ್ಡಾಜೆ ಗ್ರಾಮದ ಗೋಸಾಡ ಶ್ರೀ ಮಹಿಷಮರ್ದಿನೀ ಕ್ಷೇತ್ರದ ಬ್ರಹ್ಮಕಲಶೋತ್ಸವವು ಫೆ. 6ರಿಂದ 12ರ ವರೆಗೆ ಜರಗಲಿದ್ದು, ಪೂರ್ವಭಾವಿಯಾಗಿ ಸ್ವಯಂ ಸೇವಕರ ಸಮಿತಿಯ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಸ್ವಯಂಸೇವಕ ಸಮಿತಿ ಸಂಚಾಲಕ ಶಶಿಧರ ತೆಕ್ಕೆಮೂಲೆಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ. ವೇಣುಗೋಪಾಲ ಕಳೆಯತ್ತೋಡಿ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷರಾದ ಐತಪ್ಪ ಮವ್ವಾರು, ಅನುವಂಶಿಕ ಮೊಕ್ತೇಸರರಾದ ಶ್ರೀನಿವಾಸ ಅಮ್ಮಣ್ಣಾಯ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಎಂ. ಪ್ರಭಾಕರ ರೈ, ಸತ್ಯಮೂರ್ತಿ ಅಮ್ಮಣ್ಣಾಯ, ಸದಾಶಿವ ರೈ, ರಾಜೇಶ್ ಶೆಟ್ಟಿ, ಸುಧೀರ್ ಶೆಟ್ಟಿ ಬೆಳಿಂಜ ಉಪಸ್ಥಿತರಿದ್ದರು. ಹರೀಶ್ ನಾರಂಪಾಡಿ ಸ್ವಾಗತಿಸಿ, ಹರ್ಷರಾಜ ಭಂಡಾರಿ ವಂದಿಸಿದರು.


