ಕಾಸರಗೋಡು: ಶಿಕ್ಷಣ ಇಲಾಖೆ, ಪೆÇೀಷಕರ, ಶಿಕ್ಷಕರ ಪೆÇ್ರೀತ್ಸಾಹ, ಬೆಂಬಲ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳಿಸಲು ಅವಕಾಶ ಲಭಿಸಿದಂತಾಗುತ್ತದೆ ಎಂದು ಮಂಗಳೂರು ಕೆಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಫಾದರ್ ಆಂಟನಿ ಎಂ.ಶೆರಾ ಅಭಿಪ್ರಾಯಪಟ್ಟರು.
ಅವರು ಕಯ್ಯಾರು ಡೋನ್ ಬೋಸ್ಕೊ ಎ.ಯು.ಪಿ. ಶಾಲಾ 84 ನೇ ವಾರ್ಷಿಕೋತ್ಸವ ದಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯಅತಿಥಿಗಳಾಗಿ ಪೈವಳಿಕೆ ಗ್ರಾಮ ಪಂಚಾಯತ್ ಸದಸ್ಯೆ ರಾಜೀವಿ ರೈ, ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾ„ಕಾರಿ ದಿನೇಶ ವಿ, ಬ್ಲಾಕ್ ಯೋಜನಾ„ಕಾರಿ ಗುರುಪ್ರಸಾದ್ ರೈ, ಶಾಲಾ ಸಂಚಾಲಕ ಫಾದರ್ ಐವನ್ ಪೀಟರ್ ಡಿ'ಮೆಲ್ಲೊ, ಕಯ್ಯಾರು ಕ್ರಿಸ್ತ ರಾಜ ದೇವಾಲಯದ ಪಾಲನಾ ಸಮಿತಿ ಉಪಾಧ್ಯಕ್ಷ ಜಾರ್ಜ್ ಡಿ'ಅಲ್ಮೇಡಾ, ಶಾಲಾ ಮುಖ್ಯೋಪಾಧ್ಯಾಯ ಪೀಟರ್ ರೊಡ್ರಿಗಸ್, ಪಿ.ಟಿ.ಎ. ಅಧ್ಯಕ್ಷ ಚಿದಾನಂದ ಮಯ್ಯ, ಎಂ.ಪಿ.ಟಿ.ಎ. ಅಧ್ಯಕ್ಷೆ ರೇಣುಕಾ, ಶಾಲಾ ನಾಯಕಿ ಅರಣ್ಯ ಟಿ. ಶಾಜಿ
ಮೊದಲಾದವರು ಉಪಸ್ಥಿತರಿದ್ದರು.
ವಾರ್ಷಿಕೋತ್ಸವದಂಗವಾಗಿ ವಿದ್ಯಾರ್ಥಿಗಳ ಪೆÇೀಷಕರಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಗ್ರಾಮ ಪಂಚಾಯತ್ ಸದಸ್ಯೆ ರಾಜೀವಿ ರೈ ಬಹುಮಾನ ವಿತರಿಸಿದರು. ಪ್ರಸ್ತುತ ವರ್ಷ ಹಲವಾರು ಚಟುವಟಿಕೆಗಳಲ್ಲಿ ಯು.ಪಿ. ವಿಭಾಗದ, ಉಪಜಿಲ್ಲಾ ಮಟ್ಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಬ್ಲಾಕ್ ಯೋಜನಾ„ಕಾರಿ ಗುರು ಪ್ರಸಾದ್ ಫಲಕಗಳನ್ನು ವಿತರಿಸಿ ಶುಭ ಹಾರೈಸಿದರು.
ಶಿಕ್ಷಕಿ ಮ್ಯಾಗ್ದಲೇನ್ ಕ್ರಾಸ್ತಾ, ಪ್ರಸೀದಾ, ಶಾಂತಿ ಡಿ'ಸೋಜ ಹೆಸರುಗಳನ್ನು ಓದಿದರು. ಸಮಾರಂಭದಲ್ಲಿ ಶಾಲಾ ಪ್ರತಿಭಾವಂತ ವಿದ್ಯಾರ್ಥಿ ವಿನ್ಯಾಸ್ ಅವರನ್ನು ಅಧ್ಯಕ್ಷತೆ ವಹಿಸಿದ್ದ ಫಾದರ್ ಆಂಟನಿ ಎಂ.ಶೆರಾ ಸಮ್ಮಾನಿಸಿದರು
ಶಾಲಾ ಸಂಚಾಲಕ ಫಾದರ್ ಐವನ್ ಪೀಟರ್ ಡಿ'ಮೆಲ್ಲೊ ಸ್ವಾಗತಿಸಿದರು. ಶಿಕ್ಷಕ ಲ್ಯಾನ್ಸಿ ಡಿ'ಸೋಜ ವಂದಿಸಿದರು. ಶಿಕ್ಷಕರಾದ ಸಿರಿಲ್ ಕ್ರಾಸ್ತಾ, ಸಿಸ್ಟರ್ ರೀನಾ, ಸಿಸ್ಟರ್ ಜಾಸ್ಮಿನ್, ಫೆವಿನಾ ಮೊದಲಾದವರು ಕಾರ್ಯಕ್ರಮ ನಿರೂಪಿಸಿದರು
ಸಭಾ ಕಾರ್ಯಕ್ರಮದ ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಮುಂದುವರಿಯಿತು.
ವಾರ್ಷಿಕೋತ್ಸವದಂಗವಾಗಿ ವಿದ್ಯಾರ್ಥಿಗಳು ಮತ್ತು ಹೆತ್ತವರಿಗೆ ಕ್ರೀಡಾ ದಿನವನ್ನು ಆಚರಿಸಲಾಯಿತು. ಪಿ.ಟಿ.ಎ. ಅಧ್ಯಕ್ಷ ಚಿದಾನಂದ ಮಯ್ಯ ಧ್ವಜಾರೋಹಣ ನೆರವೇರಿಸಿದರು.


