ಕಾಸರಗೋಡು: ಮಧೂರು ಗ್ರಾಮ ಪಂಚಾಯತ್‍ನ ಎಂಟನೇ ವಾರ್ಡ್‍ನ ಮೀಪುಗುರಿಯಿಂದ ಎಸ್.ಪಿ. ಕಚೇರಿ, ಮೂನರೇ ಕ್ರಾಸ್ ರೋಡ್, ವಿ.ಜಿ.ಸಿ. ಮೈದಾನ ಮೂಲಕ ಅಣಂಗೂರಿಗೆ ಹಾದು ಹೋಗುವ ಕಾಂಕ್ರೀಟ್ ರಸ್ತೆಯನ್ನು ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ಸುರೇಶ್ ಅವರು ಉದ್ಘಾಟಿಸಿದರು. ಪಂಚಾಯತ್‍ನಿಂದ ಸಿಗುವ ಎಲ್ಲಾ ಆರ್ಥಿಕ ಸಹಾಯಕ್ಕೆ ಸ್ಥಳೀಯರು ಒಟ್ಟಾಗಿ ಸಹಕರಿಸಿದರೆ ಮಾತ್ರ ತೀರ್ಮಾನಿಸಿದ ಎಲ್ಲಾ ಯೋಜನೆಗಳು ಯಶಸ್ವಿ ರೀತಿಯಲ್ಲಿ ನಡೆಯುವುದಕ್ಕೆ ಸಾಧ್ಯ ಎಂಬುದಕ್ಕೆ ಈ ರಸ್ತೆ ಪರಿಸರದ ನಿವಾಸಿಗಳು ಸಾಕ್ಷಿ ಎಂದರು.
ಈ ಕಾಂಕ್ರೀಟ್ ರಸ್ತೆಗೆ ಸರ್ವ ವಿಧದ ಸಹಾಯ ಸಹಕಾರ ನೀಡಿದ ಕೃಷ್ಣ ಹಾರ್ಡ್‍ವೇರ್ಸ್ ಕಾಸರಗೋಡು ಇದರ ಮಾಲಕರಾದ ಸುರೇಶ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಧೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹಾಗು ಎಂಟನೇ ವಾರ್ಡ್‍ನ ಸದಸ್ಯರಾದ ದಿವಾಕರ ಆಚಾರ್ಯ ಅವರು ಅಧ್ಯಕ್ಷತೆ ವಹಿಸಿದರು. ಮಧೂರು ಗ್ರಾಮ ಪಂಚಾಯತ್ ಸದಸ್ಯ ಮಾಧವ ಮಾಸ್ಟರ್, ಮಧೂರು ಗ್ರಾಮ ಪಂಚಾಯತ್‍ನ ಎಂಜಿನಿಯರ್ ಜಿಶಿ, ಕಾಸರಗೋಡು ನಗರಸಭಾ ಎಂಟನೇ ವಾರ್ಡ್‍ನ ಕೌನ್ಸಿಲರ್ ಶಂಕರ ಕೆ, ರಸ್ತೆಯ ಕಂಟ್ರಾಕ್ಟರ್ ಬಿ.ಎಂ.ಅಬ್ದುಲ್ಲ ಮೊದಲಾದವರು ಉಪಸ್ಥಿತರಿದ್ದರು.


