ಕುಂಬಳೆ: ಕಾಸರಗೋಡು ಜಿಲ್ಲಾ ಸಹಕಾರಿ ಆಸ್ಪತ್ರೆ ಸಂಘದ ವತಿಯಿಂದ ನಿರ್ಮಿಸಲಾದ ಕುಂಬಳೆ ಸಹಕಾರಿ ಆಸ್ಪತ್ರೆಯ ನೂತನ ಕಟ್ಟಡದ ಉದ್ಘಾಟನೆ ಜ.28ರಂದು ನಡೆಯಲಿದೆ. ಇಂದು ಬೆಳಗ್ಗೆ 9.30ಕ್ಕೆ ಜರುಗುವ ಸಮಾರಂಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸುವರು. ಕಂದಾಯ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸುವರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ನಿಕಟಪೂರ್ವ ಸಂಸದ ಪಿ.ಕರುಣಾಕರನ್, ಶಾಸಕರಾದ ಎಂ.ಸಿ.ಕಮರುದ್ದೀನ್, ಎನ್.ಎ.ನೆಲ್ಲಿಕುನ್ನು, ಕೆ.ಕುಂuಟಿಜeಜಿiಟಿeಜರಾಮನ್, ಎಂ.ರಾಜಗೋಪಾಲ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಸಹಕಾರಿ ಸೊಸೈಟಿ ರೆಜಿಸ್ತ್ರಾರ್ ಡಾ.ಪಿ.ಕೆ.ಜಯಶ್ರೀ, ಎನ್.ಸಿ.ಡಿ.ಸಿ. ವಲಯ ನಿರ್ದೇಶಕ ಸತೀಶನ್, ಆಸ್ಪತ್ರೆ ಫೆಡೆರೇಶನ್ ಅಧ್ಯಕ್ಷ ಪದ್ಮನಾಭನ್ ಮಾಸ್ಟರ್ ಮುಖ್ಯ ಅತಿಥಿಯಾಗಿರುವರು.
ಬಾಪೂ ತಾಮ್ರದ ಪ್ರತಿಮೆ ಸಿದ್ಧ: ಇಂದು ಅನಾವರಣ
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಿರ್ಮಾಣಗೊಂಡಿರುವ ಮಹಾತ್ಮಾ ಗಾಂಧಿ ಅವರ ಪ್ರತಿಮೆ ಅನಾವರಣಕ್ಕೆ ಸಿದ್ಧವಾಗಿದೆ. 12 ಅಡಿ ಎತ್ತರದ ತಾಮ್ರದ ಪ್ರತಿಮೆ ಇದಾಗಿದೆ. 22 ಲಕ್ಷರೂ. ವೆಚ್ಚದಲ್ಲಿ ಶಿಲ್ಪಿ ಉಣ್ಣಿಕಾನಾಯಿ ಮೂರು ತಿಂಗಳ ಅವಧಿಯಲ್ಲಿ ಈ ಪ್ರತಿಮೆ ನಿರ್ಮಿಸಿದ್ದಾರೆ. ಪಂಚಾಯತ್ ಗಳ ಸ್ವಂತ ನಿಧಿಯಿಂದ ಕೊಡುಗೆ ಪಡೆದು ಈ ನಿರ್ಮಾಣ ನಡೆಸಲಾಗಿದೆ.
ಜಿಲ್ಲಾಧಿಕಾರಿ ಕಚೇರಿ ಆವರಣದ ಮಹಾತ್ಮ ಗಾಂಧಿ ಅವರ ತಾಮ್ರದ ಪ್ರತಿಮೆಯ ಅನಾವರಣ 28ರಂದು ನಡೆಯಲಿದೆ. ಕಂದಾಯ ಸಚಿವ ಇ.ಚಂದ್ರಶೇಖರನ್ ಅನಾವರಣ ನಡೆಸುವರು. ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸುವರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿರುವರು. ಶಾಸಕರಾದ ಕೆ.ಕುಂuಟಿಜeಜಿiಟಿeಜರಾಮನ್, ಎಂ.ರಾಜಗೋಪಾಲ್, ಎಂ.ಸಿ.ಕಮರುದ್ದೀನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಜಿಲ್ಲಧಿಕಾರಿ ಡಾ.ಡಿ.ಸಜಿತ್ ಬಾಬು, ಚೆಂಗಳ ಗ್ರಾಮಪಂಚಾಯತ್ ಅಧ್ಯಕ್ಷೆ ಷಾಹಿನಾ ಸಲೀಂ ಮೊದಲಾದವರು ಉಪಸ್ಥಿತರಿರುವರು. ಶಿಲ್ಪಿ ಉಣ್ಣಿ ಕಾನಾಯಿ ಅವರನ್ನು ಅಭಿನಂದಿಸಲಾಗುವುದು. ಮಾಜಿ ಶಾಸಕ ಕೆ.ಪಿ.ಕುಂಞ ಕಣ್ಣನ್ ವರದಿ ವಾಚಿಸುವರು.

