ಬದಿಯಡ್ಕ: ಉಕ್ಕಿನಡ್ಕದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾಸರಗೋಡು ವೈದ್ಯಕೀಯ ಕಾಲೇಜಿನ ಅಕಾಡೆಮಿಕ್ ಕಟ್ಟಡ ನಿರ್ಮಾಣ ಪೂರ್ಣಗೊಂಡಿದೆ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನ 30 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿ ಪೂರ್ಣಗೊಂಡಿದೆ. ವಿದ್ಯಾರ್ಥಿಗಳಿಗೆ ತರಗತಿ ಕೊಠಡಿಗಳು, ಪ್ರಯೋಗಾಲಯ, ಪ್ರಾಂಶುಪಾಲ, ಶಿಕ್ಷಕರ ಕೊಠಡಿಗಳು, ವಸ್ತು ಸಂಗ್ರಹಾಲಯ, ಶವಾಗಾರ ಸಹಿತ ಸೌಲಭ್ಯಗಳು ಈ ಬ್ಲಾಕ್ ನಲ್ಲಿವೆ.
ಫೆ.8ರಂದು ಕಾಲೇಜಿನ ಕಚೇರಿಯ ಉದ್ಘಾಟನೆ ನಡೆಯಲಿದೆ. ನಬಾರ್ಡ್ ನ ಸಹಾಯದೊಂದಿಗೆ ಕಾಲೇಜಿನ ಇತರ ಕಟ್ಟಡಗಳ ನಿರ್ಮಾಣ ಸಾಗುತ್ತಿದೆ. ವೈದ್ಯಕೀಯ ಕಾಲೇಜಿನ 65 ಎಕ್ರೆ ಜಾಗದಲ್ಲಿ ಈ ನಿರ್ಮಾಣ ನಡೆಯುತ್ತಿದೆ. ಬದಿಯಡ್ಕ ಗ್ರಾಮಪಂಚಾಯತಿಯ ಉಕ್ಕಿನಡ್ಕದಲ್ಲಿ 2018 ನವೆಂಬರ್ ತಿಂಗಳಲ್ಲಿ ಕಟ್ಟಡದ ಶಿಲಾನ್ಯಾಸವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ನೆರವೇರಿಸಿದ್ದರು. ಮೊದಲ ಹಂತದಲ್ಲಿ ಹೊರರೋಗಿ ವಿಭಾಗ, ನಂತರ ಒಳರೋಗಿ ವಿಭಾಗ ಸೌಲಭ್ಯ ಸಜ್ಜುಗೊಳಿಸಲಾಗುವುದು. ಇದರೊಂದಿಗೆ ಅನಿವಾರ್ಯ ಶಸ್ತ್ರಚಿಕಿತ್ಸೆ ಸಹಿತ ಸೌಲಭ್ಯಗಳನ್ನೂ ಏರ್ಪಡಿಸಲಾಗುವುದು.


