ಪೆರ್ಲ: ಶಾಲೆಗಳಲ್ಲಿ ಎಷ್ಟೋ ಸಂದರ್ಭಗಳಲ್ಲಿ ಮಕ್ಕಳಿಗೆ ಗಾಯವಾಗುವುದೋ ಅಥವಾ ಇನ್ನಿತರ ಅಪಘಾತಗಳಾದಾಗ ಹಲವು ಮಂದಿ ಶಿಕ್ಷಕರು ಪ್ರಥಮ ಚಿಕಿತ್ಸೆ ನೀಡುವುದನ್ನು ಅರಿತಿರದ ಕಾರಣ ಅಧೀರರಾಗುವುದು ಕಂಡುಬರುತ್ತಿದೆ. ಅದರಿಂದಾಗಿ ಘಟನೆಯ ಪರಿಸ್ಥಿತಿಯು ವಿಕೋಪಕ್ಕೆ ತಿರುಗುವುದೂ ಇದೆ. ತಮ್ಮ ವೃತ್ತಿಯ ಭಾಗವಾಗಿ ಶಿಕ್ಷಕರಿಗೆ ಪ್ರಥಮ ಚಿಕಿತ್ಸೆಯ ಮಹತ್ವ ಮತ್ತು ಅರಿವು ಅತೀ ಅಗತ್ಯವಾದುದು. ಅದಕ್ಕಾಗಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಕುಂಬಳೆ ಉಪಜಿಲ್ಲಾ ಘಟಕದ ವತಿಯಿಂದ ಶಿಕ್ಷಕರಿಗಾಗಿ ಪ್ರಥಮ ಚಿಕಿತ್ಸಾ ತರಬೇತಿಯನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ಮೌಲ್ಯವನ್ನರಿತು ಪೆರ್ಲದ ಶಂಕರ ಸೇವಾ ಸಮಿತಿಯವರು ಸಹಯೋಗವನ್ನೀಯುತ್ತಿದ್ದಾರೆ. ಈ ಕಾರ್ಯಕ್ರಮವು ಜ.19 ರಂದು ಬೆಳಗ್ಗೆ 10 ರಿಂದ 12.30ರ ವರೆಗೆ ಪೆರ್ಲದ ಶಂಕರ ಸದನದಲ್ಲಿ ನಡೆಯಲಿದ್ದು, ಮಂಗಳೂರಿನ ಖ್ಯಾತ ವೈದ್ಯರಲ್ಲೊಬ್ಬರಾದ ಡಾ.ರಾಮಚಂದ್ರ ಭಟ್ ಅವರು ತರಬೇತಿ ನೀಡುವರು. ಶಿಕ್ಷಕರಿಗಾಗಿ ಆಯೋಜಿಸಲ್ಪಟ್ಟ ಈ ತರಬೇತಿಯಲ್ಲಿ ಆಸಕ್ತ ಸಾರ್ವಜನಿಕರೂ ಭಾಗವಹಿಸಬಹುದು. ಹೆಚ್ಚಿನ ವಿವರಗಳಿಗಾಗಿ 7259846266 ದೂರವಾಣಿಯನ್ನು ಸಂಪರ್ಕಿಸಲು ವಿನಂತಿಸಲಾಗಿದೆ.

