ಮಧೂರು: ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮಧೂರು ಶ್ರೀಮದನಂತೇಶ್ವರ ಸಿದ್ದಿವಿನಾಯಕ ಕ್ಷೇತ್ರಕ್ಕೆ ಶನಿವಾರ ಬೆಳಗ್ಗೆ ಭೇಟಿ ನೀಡಿ ಕ್ಷೇತ್ರದಲ್ಲಿ ನಡೆಯುತ್ತಿರುವ ನವೀಕರಣ ಪ್ರಕ್ರಿಯೆಗಳ ವೀಕ್ಷಣೆ ನಡೆಸಿದರು.
ಅವರು ನವೀಕರಣ ಕೆಲಸಗಳನ್ನು ವೀಕ್ಷಿಸಿ ಸೂಕ್ಷ್ಮವಾಗಿ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ನವೀಕರಣಗೊಳ್ಳುತ್ತಿರುವ ಮಧೂರು ಶ್ರೀ ಕ್ಷೇತ್ರಕ್ಕೆ 25 ಲಕ್ಷ ರೂ.ದೇಣಿಗೆ ನೀಡುವುದಾಗಿ ಪೂಜ್ಯ ಹೆಗ್ಗಡೆಯವರು ಈ ಸಂದರ್ಭದಲ್ಲಿ ಭರವಸೆ ನೀಡಿದರು. ಈ ಹಿಂದೆಯೂ ಧರ್ಮಸ್ಥಳದಿಂದ 25ಲಕ್ಷ ದೇಣಿಗೆ ನೀಡಲಾಗಿತ್ತು.
ಈ ಸಂದರ್ಭದಲ್ಲಿ ಮಾಣಿಲ ಶ್ರೀಧಾಮದ ಶ್ರೀಮೋಹನ ದಾಸ ಪರಮಹಂಸ ಸ್ವಾಮಿಗಳು, ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯ ನವೀಕರಣ ಸಮಿತಿ ಅಧ್ಯಕ್ಷ ಯು.ತಾರಾನಾಥ ಆಳ್ವ, ಉಪಾಧ್ಯಕ್ಷ ಹಾಗೂ ಪುನಃನಿರ್ಮಾಣ ಸಮಿತಿ ಅಧ್ಯಕ್ಷ ಡಾ.ಬಿ.ಎಸ್ ರಾವ್, ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ಅಭಿಯಂತರ ಜಗನ್ನಿವಾಸ ರಾವ್ ಪುತ್ತೂರು, ಹುಡ್ಕೋ ಅಧ್ಯಕ್ಷ ರವೀಂದ್ರ ಆಳ್ವ ಸಿರಿಬಾಗಿಲು, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ, ಶ್ರೀಕ್ಷೇತ್ರದ ಕಾರ್ಯನಿರ್ವಾಹಣಾಧಿಕಾರಿ ಬಾಬು.ಕೆ, ದೇವಸ್ಥಾನದ ಪ್ರಬಂಧಕ ಗೋಪಾಲಕೃಷ್ಣ ಭಟ್, ಮಧೂರು ಶ್ರೀ ಮದರು ಮಹಾಮಾತೆ ಮೊಗೇರ ಸಮಾಜದ ಗೌರವಾಧ್ಯಕ್ಷ ಆನಂದ ಮವ್ವಾರ್, ಅಧ್ಯಕ್ಷ ವಸಂತ ಅಜಕ್ಕೋಡು, ಪ್ರ.ಕಾರ್ಯದರ್ಶಿ ಡಿ.ಶಂಕರ, ಗೌರವ ಸಲಹೆಗಾರರಾದ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ರಾಮಪ್ಪ ಮಂಜೇಶ್ವರ, ಕೃಷ್ಣ ಡಿ, ಪದಾಧಿಕಾರಿಗಳಾದ ರಾಮ ಪಟ್ಟಾಜೆ, ಸುರೇಶ್ ಅಜಕ್ಕೋಡು, ಅನಿಲ್ ಅಜಕ್ಕೋಡು, ಡಿ.ಗೋಪಾಲ, ಸುಧಾಕರ ಬೆಳ್ಳಿಗೆ, ಪುನಃ ನಿರ್ಮಾಣ ಸಮಿತಿ ಪದಾಧಿಕಾರಿ ಮಂಜುನಾಥ, ದೇವಾಲಯದ ಅರ್ಚಕ ಶ್ರೀಕೃಷ್ಣ ಉಪಾಧ್ಯಾಯ, ಪವಿತ್ರವಾಣಿ ರತನ್‍ಕುಮಾರ್ ಕಾಮಡ, ನವೀಕರಣ ಸಮಿತಿ ಮತ್ತು ಭಕ್ತಜನ ಸಮಿತಿಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.



