ಕುಂಬಳೆ: ಕಣಿಪುರ ಶ್ರೀಗೋಪಾಲಕೃಷ್ಣ ದೇವಾಲಯದ ವಾರ್ಷಿಕ ಜಾತ್ರೆಯ ಅಂಗವಾಗಿ ಶುಕ್ರವಾರ ರಾತ್ರಿ ಐತಿಹಾಸಿಕ ಬೆಡಿ ಉತ್ಸವ(ಸಿಡಿಮದ್ದು ಪ್ರದರ್ಶನ) ಕುಂಬಳೆ ಕೇಂದ್ರ ಮೈದಾನದಲ್ಲಿ ನಡೆಯಿತು.
ವಿಶಿಷ್ಟ ಬೆಡಿ ವೀಕ್ಷಣೆಗೆ ವಿವಿಧೆಡೆಗಳಿಂದ ಸಾವಿರಾರು ಮಮದಿ ಸಾಕ್ಷಿಯಾದರು. ಶ್ರೀದೇವರು ದೇವಾಲಯದಿಂದ ಬೆಡಿಕಟ್ಟೆಗೆ ಆಗಮಿಸಿದ ಬಳಿಕ ರಾತ್ರಿ 10.45ರ ಸುಮಾರಿಗೆ ಬೆಡಿ ಪ್ರದರ್ಶನ ನಡೆಯಿತು. ಸುಮಾರು ಒಂದು ಗಮಟೆಗಳಿಗಿಮತಲೂ ಹೆಚ್ಚು ಹೊತ್ತಿನ ಆಕರ್ಷಕ ಸಿಡಿಮದ್ದು ಪ್ರದರ್ಶನ ನಡೆಯಿತು.
ಶನಿವಾರ ಬೆಳಗ್ಗೆ 11ಕ್ಕೆ ತುಲಾಭಾರ ಸೇವೆ, ಸಂಜೆ 6.30ಕ್ಕೆ ದೀಪಾರಾಧನೆ, ರಾತ್ರಿ 9ಕ್ಕೆ ಉತ್ಸವ, ಶ್ರೀದೇವರ ಅವಭೃತ ಸ್ನಾನ, ರಾಜಾಂಗಣ ಪ್ರಸಾದ, ಧ್ವಜಾವರೋಹಣ ನಡೆಯಿತು. ಸಂಜೆ 5 ರಿಂದ ಯಕ್ಷದ್ರುವ ಪಟ್ಲ ಪೌಂಡೇಶನ್ ಕುಂಬಳೆ ಘಟಕದ ವತಿಯಿಂದ ಅಭಿನಂದನಾ ಕಾರ್ಯಕ್ರಮ, ವೈ.ಡಿ ನಾಯಕ್ ಸಂಸ್ಮರಣೆ ಹಾಗೂ ಯಕ್ಷಗಾನ ವೈಭವ ನಡೆಯಿತು. ಬಳಿಕ ರಾತ್ರಿ 10 ರಿಂದ ಯಕ್ಷಮಿತ್ರರು ಮುಜುಂಗಾವು ಇವರಿಂದ ಮಹಾಶೂರ ಭೌಮಾಸುರ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು.
ಭಾನುವಾರ ಶ್ರೀದೇವರಿಗೆ ಪಂಚಾಮೃತಾಭಿಷೇಕ, ಎಳನೀರು ಅಭಿಷೇಕ, ಮಹಾಪೂಜೆ,ಶ್ರೀಬಲಿ, ಅನ್ನದಾನ, ಸಂಜೆ ದೀಪಾರಾಧನೆ, ಭಜನೆ, ರಾತ್ರಿ ಮಹಾಪೂಜೆ, ಶ್ರೀಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆಯೊಂದಿಗೆ ವಾರ್ಷಿಕ ಉತ್ಸವ ಸಂಪನ್ನಗೊಂಡಿತು.



