ಬದಿಯಡ್ಕ : ಸಮಾಜದ ಅಭಿವೃದ್ಧಿಗೆ ಶ್ರಮವಹಿಸುವ ಯುವಕರು ಸಂಘಟನಾ ಕೆಲಸಗಳಲ್ಲಿ ಸಕ್ರಿಯರಾಗಬೇಕು. ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂಬುದಾಗಿ ಮದರು ಮಹಾಮಾತೆ ಮೊಗೇರ ಸಮಾಜದ ಕಾಸರಗೋಡು ಜಿಲ್ಲಾಧ್ಯಕ್ಷ ವಸಂತ ಅಜಕ್ಕೋಡು ಹೇಳಿದರು.
ಸಮಾಜದ ಜಿಲ್ಲಾ ಸಮಿತಿಯ ಬುಧವಾರ ನಡೆದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನೀರ್ಚಾಲು ಪ್ರಾದೇಶಿಕ ಕಚೇರಿಯಲ್ಲಿ ನಡೆದ ಸಬೆಯಲ್ಲಿ ಗೌರವ ಸಲಹೆಗಾರರಾದ ಕೃಷ್ಣ ಡಿ. ದರ್ಬೆತ್ತಡ್ಕ, ರಾಮಪ್ಪ ಮಂಜೇಶ್ವರ, ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಉಪಾಧ್ಯಕ್ಷೆ ಸುರೇಖಾ ಅಜಕ್ಕೋಡು, ಕೋಶಾಧಿಕಾರಿ ಕೃಷ್ಣಾದಾಸ್ ಡಿ, ರಾಮಪಟ್ಟಾಜೆ, ಗೌರವ ಸಲಹೆಗಾರ ನಿಟ್ಟೋಣಿ ಬಂದ್ಯೋಡು, ಗೋಪಾಲ ಡಿ., ಕಾರ್ಯದರ್ಶಿ ಸುನಂದಾ, ಸುಂದರ ಬಾರಡ್ಕ, ಅನಿಲ್ ಅಜಕ್ಕೋಡು, ಹರಿಶ್ಚಂದ್ರ ಪುತ್ತಿಗೆ, ರಾಜೇಶ್ ಪೆರಿಯಡ್ಕ ಮೊದಲಾದವರು ಮಾತನಾಡಿದರು. ಈ ಸಂದರ್ಭದಲ್ಲಿ ಮದರು ಮಹಾಮಾತೆ ಮೊಗೇರ ಸಮಾಜದ ಮಹಿಳಾ ಸಮಿತಿಯನ್ನು ರೂಪಿಕರಿಸಲು ನಿರ್ಧರಿಸಲಾಯಿತು. ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನಾ ಮಂದಿರದ ಸಭಾಂಗಣದಲ್ಲಿ ನಡೆದ ವಿಚಾರಗೋಷ್ಠಿ ಮತ್ತು ವಾರ್ಷಿಕ ಮಹಾಸಭೆಯ ಯಶಸ್ವಿಗೆ ಸಹಕರಿಸಿದ ಸರ್ವರನ್ನೂ ಅಭಿನಂದಿಸಲಾಯಿತು. ಪ್ರಧಾನ ಕಾರ್ಯದರ್ಶಿ ಶಂಕರ ಡಿ. ಸ್ವಾಗತಿಸಿ, ಕಾರ್ಯದರ್ಶಿ ಸುಧಾಕರ ಬೆಳ್ಳಿಗೆ ವಂದಿಸಿದರು.


