ಕುಂಬಳೆ: ಕುಂಬಳೆ ಸೀಮೆಯ ಪ್ರಮುಖ ನಾಲ್ಕು ದೇವಸ್ಥಾನಗಳಲ್ಲಿ ಒಂದಾದ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಐತಿಹಾಸಿಕ ಬೆಡಿ ಉತ್ಸವ ಇಂದು(ಶುಕ್ರವಾರ)ನ ರಾತ್ರಿ ಕುಂಬಳೆ ಬೆಡಿಗದ್ದೆ(ಗಾಂಧಿ ಮೈದಾನದ ಪಕ್ಕ) ನಡೆಯಲಿದೆ.
ಮಂಗಳವಾರ ಧ್ವಜಾರೋಹಣಗೊಂಡ ವಾರ್ಷಿಕ ಉತ್ಸವದ ಎರಡನೇ ದಿನವಾದ ಬುಧವಾರ ಬೆಳಗ್ಗೆ ಮತ್ತು ರಾತ್ರಿ ಉತ್ಸವ ಬಲಿ ನಡೆಯಿತು. ಸಂಜೆ 7 ರಿಂದ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಬಾಲ ಪ್ರತಿಭೆ ಸಮನ್ವಿತಾ ಗಣೇಶ್ ಅಣಂಗೂರು ಅವರಿಂದ ಭಕ್ತಿಸಂಗೀತ ಕಾರ್ಯಕ್ರಮ ನಡೆಯಿತು. ರಾತ್ರಿ 11.30 ರಿಂದ ಕಟೀಲು ಶ್ರೀದುರ್ಗಾಪರಮೇಶ್ವರಿ ಕೃಪಾಪೋಶಿತ ಯಕ್ಷಗಾನ ಮಂಡಳಿಯವರಿಂದ ಶ್ರೀದೇವೀ ಮಹಾತ್ಮ್ಯೆ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಗುರುವಾರ ರಾತ್ರಿ 9ಕ್ಕೆ ನಡು ದೀಪೋತ್ಸವ, ದರ್ಶನ ಬಲಿ ನಡೆಯಿತು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 6.30 ರಿಂದ ಬೆಳಗಾವಿಯ ರಜತ ಕುಲಕರ್ಣಿ ಬಳಗದವರಿಂದ ಹಿಂದೂಸ್ತಾನಿ ಸಂತವಾಣಿ ಹಾಗೂ ದಾಸವಾಣಿ ನಡೆಯಿತು.
ಇಂದು ಬೆಡಿ:
ಇಂದು ರಾತ್ರಿ 9.45ಕ್ಕೆ ಬೆಡಿಕಟ್ಟೆಯಲ್ಲಿ ವಿಶೇಷ ಸುಡುಮದ್ದು ಪ್ರದರ್ಶನ ನಡೆಯುವುದು. ಬೆಳಿಗ್ಗೆ 6ಕ್ಕೆ ಉತ್ಸವ, ಶ್ರೀಭೂತಬಲಿ, 10.30 ರಿಂದ ತುಲಾಭಾರ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನದಾನ ನಡೆಯಲಿದೆ. ಸಂಜೆ 4.30ರಿಂದ ಭಜನಾ ಸಂಕೀರ್ತನೆ, 6.15 ರಿಂದ ನಾಟ್ಯನಿಲಯಂ ಬಾಲಕೃಷ್ಣ ಮಾಸ್ತರ್ ಮಂಜೇಶ್ವರ ಅವರ ಶಿಷ್ಯವೃಂದದವರಿಂದ ಭರತನಾಟ್ಯ ಪ್ರದರ್ಶನ, 6ಕ್ಕೆ ತಾಯಂಬಕ, 6.30ಕ್ಕೆ ದೀಪಾರಾಧನೆ, ರಾತ್ರಿ 9 ರಿಂದ ಶ್ರೀಬಲಿ ಉತ್ಸವ, ರಾತ್ರಿ 9.45 ರಿಂದ ಬೆಡಿ ಉತ್ಸವದ ಬಳಿಕ ಮುಂಜಾನೆ 2.45 ರಿಂದ ಶಯನ, ಕವಾಟ ಬಂಧನ ನಡೆಯಲಿದೆ.
ನಾಳೆ(ಶನಿವಾರ) ಧ್ವಜಾವರೋಹಣ:
18ರಂದು ಬೆಳಗ್ಗೆ 11ಕ್ಕೆ ತುಲಾಭಾರ ಸೇವೆ, ಸಂಜೆ 6.30ಕ್ಕೆ ದೀಪಾರಾಧನೆ, ರಾತ್ರಿ 9ಕ್ಕೆ ಉತ್ಸವ, ಶ್ರೀದೇವರ ಅವಭೃತ ಸ್ನಾನ, ರಾಜಾಂಗಣ ಪ್ರಸಾದ, ಧ್ವಜಾವರೋಹಣ ನಡೆಯುವುದು. ರಾತ್ರಿ 8.30 ರಿಂದ ಯಕ್ಷದ್ರುವ ಪಟ್ಲ ಪೌಂಡೇಶನ್ ಕುಂಬಳೆ ಘಟಕದ ವತಿಯಿಂದ ಯಕ್ಷಗಾನ ವೈಭವ ನಡೆಯಲಿದೆ. ಬಳಿಕ ರಾತ್ರಿ 10 ರಿಂದ ಯಕ್ಷಮಿತ್ರರು ಮುಜುಂಗಾವು ಇವರಿಂದ ಮಹಾಶೂರ ಭೌಮಾಸುರ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ. 19 ರಂದು ಶ್ರೀದೇವರಿಗೆ ಪಂಚಾಮೃತಾಭಿಷೇಕ, ಎಳನೀರು ಅಭಿಷೇಕ, ಮಹಾಪೂಜೆ,ಶ್ರೀಬಲಿ, ಅನ್ನದಾನ, ಸಂಜೆ ದೀಪಾರಾಧನೆ, ಭಜನೆ, ರಾತ್ರಿ ಮಹಾಪೂಜೆ, ಶ್ರೀಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಲಿದೆ.


